Slider


ಕುಂದಾಪುರ: ಎಲ್ಲಾ ಖಾಸಗಿ ಬಸ್‌ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಪೊಲೀಸ್ ಇಲಾಖೆ ಸೂಚನೆ

Udupinews

 





ಕುಂದಾಪುರ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಸರಕಾರಿ ಬಸ್ ಸಂಬಂಧಿತರು ಹಾಗೂ ಖಾಸಗಿ ಬಸ್ ಮಾಲಕರ ಸಭೆಯು ಸೆ.28ರಂದು ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ನಡೆಯಿತು.

ಖಾಸಗಿ ಬಸ್‌ಗಳು ಅ.31ರೊಳಗಾಗಿ ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸಬೇಕು. ಕರ್ಕಶ ಹಾರ್ನ್‌ಗಳನ್ನು ತೆರವು ಗೊಳಿಸುವಂತೆ ಮತ್ತು ಚಾಲಕರು ಚಾಲನೆಯ ವೇಳೆ ಮೊಬೈಲ್ ಫೋನ್ ಬಳಸದಂತೆ ಸಭೆಯಲ್ಲಿ ಸೂಚಿಸಲಾಯಿತು. ಬಸ್‌ಗಳ ಒಳಗೆ ಸಿ.ಸಿ ಕ್ಯಾಮೆರಾ ಅಳವಡಿಸಬೇಕು ಹಾಗೂ ಮಹಿಳೆಯರು ಮತ್ತು ಮಕ್ಕಳೊಂದಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಗೌರವಯುತವಾಗಿ ನಡೆದುಕೊಳ್ಳಬೇಕು. ಇತರ ಸಂಚಾರ ನಿಯಮಗಳನ್ನು ಬಸ್ ಚಾಲಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದರು. 

ಸಭೆಯಲ್ಲಿ ಕುಂದಾಪುರ ಡಿವೈಎಸ್ಪಿಬೆಳ್ಳಿಯಪ್ಪಕೆ.ಯು., ಕುಂದಾಪುರ ನಗರ ಠಾಣೆ ನಿರೀಕ್ಷಕ ನಂಜಪ್ಪಎನ್., ಎಸ್ಸೈ ವಿನಯ ಕೊರ್ಲಹಳ್ಳಿ, ಸಂಚಾರ ಪೊಲೀಸ್ ಠಾಣೆ ಎಸ್ಸೈ ಪ್ರಸಾದ್ ಕೆ., ಕುಂದಾಪುರ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ವಿವಿಧ ಸರಕಾರಿ ಬಸ್‌ಗಳಿಗೆ ಸಂಬಂಧಪಟ್ಟವರು ಹಾಗೂ ಖಾಸಗಿ ಬಸ್‌ಗಳ ಮಾಲಕರು ಹಾಗೂ ಮ್ಯಾನೇಜರ್‌ಗಳು ಹಾಜರಿದ್ದರು.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo