ತಿರುಪತಿಯ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಬೆರೆಸಿದವರನ್ನು ಎನ್‌ಕೌಂಟರ್ ಮಾಡಿ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಈ ಸಂಬಂಧ ವೀಡಿಯೋ ಬಿಡುಗಡೆ ಮಾಡಿದ ಅವರು, ಚಂದ್ರಬಾಬು ನಾಯ್ಡು ಅವರು ಎರಡು ದಿನಗಳ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಜೊತೆಗೆ ಇದಕ್ಕೆ ಪೂರಕವಾದಂತಹ ದಾಖಲೆ ಕೂಡ ಬಹಿರಂಗಪಡಿಸಿದ್ದಾರೆ ಎಂದರು.
ಇದು ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಅಧಿಕಾರವಧಿಯಲ್ಲಿ ನಡೆದ ಘೋರ ಅಪರಾಧವಾಗಿದೆ. ಹಿಂದೂ ಸಮಾಜ ಅಷ್ಟೇ ಅಲ್ಲ, ತಿರುಪತಿಯ ತಿಮ್ಮಪ್ಪ ಕೂಡ ಕ್ಷಮಿಸಲಾರದಂತಹ ಅಪರಾಧವನ್ನು ಅವರು ಮಾಡಿದ್ದಾರೆ. ಇಡೀ ದೇಶದಿಂದ ಕೋಟಿಗಟ್ಟಲೆ ಭಕ್ತರು ಅಲ್ಲಿಗೆ ಹೋಗುತ್ತಾರೆ. ಇಂತಹ ಪುಣ್ಯಕ್ಷೇತ್ರದ ಪ್ರಸಾದದಲ್ಲಿ ದ್ರೋಹ ಮಾಡಿದ್ದಾರೆ ಅಂದ್ರೆ ಇದನ್ನು ಕ್ಷಮಿಸೋಕೆ ಸಾಧ್ಯನೇ ಇಲ್ಲ. ಹೀಗಾಗಿ ಇಂತಹ ಕೃತ್ಯ ಎಸಗಿದವರನ್ನು ಎನ್‌ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದರು.
ಹಿಂದೂಗಳ ನಂಬಿಕೆ, ವಿಶ್ವಾಸಕ್ಕೆ ಆಘಾತ ಉಂಟಾಗಿದೆ. ಪ್ರಸಾದ ಎಂಬ ವಸ್ತುವಿಗೆ ಕಲಂಕ ತಂದಂತಹ ಆ ಸರ್ಕಾರದ ತಪ್ಪಿತಸ್ಥರ ಮೇಲೆ ಇಂದಿನ ಕೋರ್ಟಿನ ಸೆಕ್ಷನ್‌ಗಳನ್ನು ಹಾಕುವುದು ಮಾತ್ರವಲ್ಲ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದು ಬರೀ ಬಾಯಿ ಮಾತಿನಲ್ಲಿ ಮಾತ್ರ ಆಗಬಾರದು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ