ಗಂಗೊಳ್ಳಿ. ಸ್ಥಳೀಯ ಜಾಮಿಯಾ ಮೊಹಲ್ಲಾ ಪೊಲೀಸ್ ಚೆಕ್ ಪೋಸ್ಟ್ ಎದುರಿನ ನಿವಾಸಿ ಬಷೀರ್ ಅಹ್ಮದ್ ಎಂಬವರ ಪುತ್ರ 30 ವರುಷ ಪ್ರಾಯದ ಮುಬಾಶೀರ್ ಬಷೀರ್ ಇಂದು ಸೌದಿ ಅರೇಬಿಯಾದಲ್ಲಿ ಹೃದಯಾಘಾತ ದಿಂದ ನಿಧನ ಹೊಂದಿದ್ದಾನೆ ಎಂಬ ಮಾಹಿತಿ ಮಾಹಿತಿ ದೊರೆತಿದ್ದು, ಇದನ್ನು ಸೌದಿ ಯಲ್ಲಿ ಇರುವ ಸ್ಥಳೀಯ ಅನಿವಾಸಿ ಭಾರತೀಯರು ಹಾಗೂ ಗಂಗೊಳ್ಳಿಯಲ್ಲಿ ಇರುವ ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ.
ಎರಡು ವರುಷಗಳ ಹಿಂದೆ ಮಹಾರಾಷ್ಟ್ರದ ಪೂನಾ ಮೂಲದ ಯುವತಿಯನ್ನು ವಿವಾಹವಾಗಿದ್ದ ಈತ, ಪತ್ನಿಯ ಜೊತೆಯಲ್ಲಿಯೇ ಸೌದಿ ಯಲ್ಲಿ ಉದ್ಯೋಗದಲ್ಲಿದ್ದ. ಪ್ರಾಥಮಿಕ ಶಿಕ್ಷಣವನ್ನು ಕುಂದಾಪುರ ಹೆಚ್ ಎಂ ಎಂ ಶಾಲೆ, ಪ್ರೌಡ ಶಿಕ್ಷಣವನ್ನು ವಿ ಕೆ ಆರ್ ಆಂಗ್ಲ ಮಾಧ್ಯಮ ಶಾಲೆ, ಪಿ ಯು ಶಿಕ್ಷಣವನ್ನು ಭಂಡರ್ಕಾರ್ಸ್ ಕಾಲೇಜು, ತದನಂತರ ಇಂಜಿನಿಯರಿಂಗ್ ಪದವಿಯನ್ನು ಭಟ್ಕಳದ ಅಂಜುಮನ್ ಕಾಲೇಜು ಹಾಗೂ ಚೆನ್ನೈ ಯ ಕಾಲೇಜಿನಲ್ಲಿ ಮಾಡಿದ್ದ..
ಊರಿನಲ್ಲಿದ್ದಾಗ ಜನರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದ ಈತ, 4 ವರುಷಗಳ ಹಿಂದೆ ತ್ರಾಸಿ ಮರವಂತೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಉಪ್ಪಿನಂಗಡಿ ಮೂಲದ ಬಾಲಕನ ಅಂತ್ಯಸಂಸ್ಕಾರದ ಕಾರ್ಯವನ್ನು, ವಿಧಿವಿಧಾನಗಳನ್ನು ಗಂಗೊಳ್ಳಿಯ ತನ್ನ ಮನೆಯಲ್ಲಿಯೇ ನೇರವೇರಿಸಲು ಅವಕಾಶ ಮಾಡಿ ಕೊಟ್ಟಿದ್ದಲ್ಲದೆ, ಗಾಯಾಳು ಒರ್ವರ ಆಸ್ಪತ್ರೆ ವೆಚ್ಚವನ್ನು ತಾನೇ ಭರಿಸಿದ್ದ. ಕಷ್ಟದಲ್ಲಿ ಇದ್ದಾಗ ಸಹಾಯ ಮಾಡುವುದಲ್ಲದೇ, ತುರ್ತು ಸಂದರ್ಭ ಹೆಗಲಿಗೆ ಹೆಗಲು ಕೊಡುತ್ತಿದ್ದ ಈತ, ಕೆಲ ಸಮಯದ ಹಿಂದೆ ಉದ್ಯೋಗಕ್ಕಾಗಿ ಸೌದಿ ತೆರಳಿದ್ದ. ಮೃತ ಯುವಕ ಪತ್ನಿ, ತಾಯಿ,ತಂದೆ, ಹಾಗೂ ಓರ್ವ ಸಹೋದರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದು, ಅಂತ್ಯಕ್ರಿಯೆ ವಿಧಿವಿಧಾನಗಳ ಬಗ್ಗೆ ಸೌದಿ ದೇಶದ ಕಾನೂನೂ ಕ್ರಮಗಳ ನಂತರವೇ ತಿಳಿದು ಬರಲಿದೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ