ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ಕೇಂದ್ರ ಸರಕಾರವು ಬಿಪಿಎಲ್ ಹೊಂದಲು ನಿಗದಿಪಡಿಸಿರುವ ಮಾನದಂಡಗಳ ಪೈಕಿ ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂ.ಗಳ ಒಳಗೆ ಇರಬೇಕು ಎಂದು ಮಿತಿ ನಿಗದಿಪಡಿಸಿರುವುದು ರಾಜ್ಯದಲ್ಲಿರುವ ಬಿಪಿಎಲ್ ಕಾರ್ಡುದಾರರು ಆತಂಕಕ್ಕೆಒಳಗಾಗಿದ್ದಾರೆ.
ಬಿಪಿಎಲ್ ಕಾರ್ಡುಗಳು ಕೇವಲ ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯಲು ಅಷ್ಟೇ ಉಪಯೋಗಕ್ಕೆ ಬರುವುದಿಲ್ಲ ಬದಲಾಗಿ ಆರೋಗ್ಯ ಸಂಬಂಧಿ ಸೇವೆಗಳಿಗೂ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಪಿಎಲ್ ಕಾರ್ಡುಗಳಿಗೆ ಬೇಡಿಕೆ ಇದೆ.ಮೂಲ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರಿದೆ. ಆದರೆ, ಅದಕ್ಕನುಗುಣವಾಗಿ ಜನ ಸಾಮಾನ್ಯರ ಆದಾಯ ಮಾತ್ರ ಹೆಚ್ಚಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ವಾರ್ಷಿಕ ಆದಾಯ ಮಿತಿ 1.20ಲಕ್ಷ ರ ಲಕ್ಷ ರೂ.ಮೀರಬಾರದು ಎಂಬ ಮಾನದಂಡ ವಿಧಿಸಿರುವುದು ಅವೈಜ್ಞಾನಿಕ ಕ್ರಮ ಎಂದು ಫಲಾನುಭವಿಗಳು ಆಸಮಾಧಾನ ಹೊರಹಾಕಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ