ದೆಹಲಿಯಲ್ಲಿ ವರದಿಯಾದ ಇತ್ತೀಚಿನ ನರಬಲಿ ಪ್ರಕರಣವನ್ನೇ ಮೀರಿಸುವ ಬೀಭತ್ಸ ಕೃತ್ಯದ ಮಾದರಿಯಲ್ಲೇ ರಾಷ್ಟ್ರ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ನಗರದ ವೈಯಾಲಿಕಾವಲ್ನ ಪೈಪ್ ಲೈನ್ ರಸ್ತೆಯ ವೀರಣ್ಣ ಭವನ ಬಳಿಯ ಮನೆಯೊಂದರಲ್ಲಿ ಆರೋಪಿಯು ಯುವತಿಯನ್ನು ಕೊಂದು ಆಕೆಯ ಮೃತ ದೇಹವನ್ನು 30 ತುಂಡು ಮಾಡಿ ಫ್ರಿಜ್‌ನಲ್ಲಿ ಇಟ್ಟಿರುವ ಅಮಾನವೀಯ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ.
ಮಹಾಲಕ್ಷ್ಮಿ (26) ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಚತ್ತೀಸ್‌ಗಢ ಅಥವಾ ಪಶ್ಚಿಮ ಬಂಗಾಳದ ಮೂಲದ ಸುಮಾರು 26 ವಯಸ್ಸಿನ ಯುವತಿ ಎಂದು ಗುರುತಿಸಲಾಗಿದ್ದು, ಹದಿನೈದು ದಿನಗಳ ಹಿಂದೆಯೇ ಭೀಕರ ಕೊಲೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಆಯುಕ್ತ ಸತೀಶ್ ಕುಮಾರ್ ಹಾಗೂ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ