ಮಣಿಪಾಲ:- ಪರ್ಕಳ ಈಶ್ವರ ನಗರದ ರಸ್ತೆ ಬದಿಯಲ್ಲಿರುವ ಉಡುಪಿ ನಗರಸಭೆಗೆ ಸಂಬಂಧಪಟ್ಟ ಪಂಪ್ ಹೌಸ್ ಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ ಇಂದು ನಸುಕಿನ ವೇಳೆ ಒಂದು ಗಂಟೆ ಸುಮಾರಿಗೆ ನಡೆದಿದೆ.
ಈ ವೇಳೆ ಪಂಪ್ ಹೌಸ್ ನಲ್ಲಿ ರಾತ್ರಿ ಮಲಗಿದ್ದ ಸಿಬ್ಬಂದಿಯೊಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮಣಿಪಾಲ ಕಡೆಯಿಂದ ಪರ್ಕಳ ಕಡೆ ಹೋಗುತ್ತಿದ್ದ ಕಾರು, ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಂಪ್ ಹೌಸ್ ಗೆ ಢಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಪಂಪ್ ಹೌಸ್ ಕಟ್ಟಡಕ್ಕೂ ಹಾನಿಯಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ