ಪುತ್ತೂರು ಗ್ರಾಮದ ನಯಂಪಳ್ಳಿಯ ಸುವರ್ಣ ನದಿಯ ಬ್ರಿಡ್ಜ್ ಬಳಿಯ ಎಜಿಪಿ ಲೇಬರ್ ಕಾಲೋನಿ ಬಳಿ ಇಂದು ಬೆಳಗಿನ ಜಾವ ಪರಸ್ಪರ ಹಲ್ಲೆ ನಡೆಸಿ ಶಾಂತಿಭಂಗ ಉಂಟು ಮಾಡಿದ ಆರೋಪದಡಿ ಎಂಟು ಮಂದಿ ಛತ್ತೀಸಘಡ ಮೂಲದ ಕಾರ್ಮಿಕರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಛತ್ತೀಸಘಡ ರಾಜ್ಯದ ಮೂಖ್ರಾಮ್, ಸುಭಾಷ್ ಕುಮಾರ್, ಆಶೀಮ್, ವಿಕಾಸ್, ಸ್ಯಾಂಟ್ ಲಾಲ್, ವಿಶಾಲ್, ಮಗೇಶ್, ಅಖಿಲೇಶ್ ಬಂಧಿತ ಆರೋಪಿಗಳು. ಪೈಪ್‌ಲೈನ್ ಕೆಲಸಕ್ಕಾಗಿ ಉಡುಪಿ ಬಂದಿದ್ದ ಇವರು, ನಯಂಪಳ್ಳಿಯ ಎಜಿಪಿ ಲೇಬರ್ ಕಾಲೋನಿ ಬಳಿ ಶೆಡ್‌ನಲ್ಲಿ ವಾಸವಾಗಿದ್ದರು.
ಇವರು ಕ್ಷುಲ್ಲಕ ಕಾರಣಕ್ಕಾಗಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಭಯದ ಮತ್ತು ಪ್ರಕ್ಷುಬ್ದ ವಾತಾವರಣ ಉಂಟುಮಾಡಿದ್ದಾರೆ. ಈ ಮೂಲಕ ಇವರು ಸಾರ್ವಜನಿಕ ಶಾಂತಿ ಭಂಗವುಂಟು ಮಾಡಿರು ವುದಾಗಿ ಆರೋಪಿಸಿ ಉಡುಪಿ ನಗರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಅದರಂತೆ ಪೊಲೀಸರು ಎಂಟು ಮಂದಿ ಕಾರ್ಮಿಕರನ್ನು ಬಂಧಿಸಿದರು. ಇದರಿಂದ ಕೆಲವು ಕಾರ್ಮಿಕರಿಗೆ ಗಾಯಗಳಾಗಿದ್ದು, ಯಾರಿಗೂ ಗಂಭೀರ ಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ