Slider

ಕುಂದಾಪುರ:- ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಬಂದಿದ್ದ ಚಿನ್ನದ ಆಭರಣ ಕಳವು; ಅರ್ಚಕನ ಬಂಧನ

Udupinews

 




ಗಂಗೊಳ್ಳಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನಕ್ಕೆ ಹರಕೆಯ ರೂಪದಲ್ಲಿ ಬಂದಿದ್ದ ಚಿನ್ನದ ಆಭರಣಗಳನ್ನು ಕಳವು ಮಾಡಿ, ನಕಲಿ ಆಭರಣಗಳನ್ನು ಇಟ್ಟು ಪೂಜೆ ಮಾಡುತ್ತಿದ್ದ, ದೇವಸ್ಥಾನದ ಅರ್ಚಕ ಉತ್ತರಕನ್ನಡ ಜಿಲ್ಲೆಯ ಶಿರಸಿಯ ನರಸಿಂಹ ಭಟ್ (43) ಎಂಬುವವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಹರಕೆ ರೂಪದಲ್ಲಿ ಭಕ್ತರು ಒಪ್ಪಿಸುತ್ತಿದ್ದ ಚಿನ್ನ ಬಳಸಿ ದೇವಸ್ಥಾನದ ಆಡಳಿತ ದೇವಿಗೆ ಚಿನ್ನಾಭರಣಗಳನ್ನು ಮಾಡಿಸಿತ್ತು. ಅದನ್ನು ನಿತ್ಯ ಪೂಜೆಯ ವೇಳೆ ಅಮ್ಮನವರಿಗೆ ತೊಡಿಸಲಾಗುತ್ತಿತ್ತು. ನವರಾತ್ರಿ ಸಂಭ್ರಮಾಚರಣೆಗೆ ಆಭರಣಗಳ ಶುದ್ಧಾಚಾರಕ್ಕಾಗಿ ಕೊಡುವಂತೆ ನರಸಿಂಹ ಭಟ್ ಬಳಿ ಆಡಳಿತ ಮಂಡಳಿ ಶನಿವಾರ ಕೇಳಿತ್ತು. ಆಭರಣದ ಬಗ್ಗೆ ಸಂದೇಹ ಬಂದು ವಿಚಾರಿಸಿದಾಗ ವೈಯಕ್ತಿಕ ಕಾಣಕ್ಕಾಗಿ ಆಭರಣ ತೆಗೆದು ನಕಲಿ ಆಭರಣ ಇರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಭಕ್ತರು ದೇವಿಗೆ ಅರ್ಪಿಸಿದ 40 ಗ್ರಾಂ ತೂಕದ ಚಿನ್ನದ ಜೋಬಿನ ಸರ, 73 ಗ್ರಾಂ ತೂಕದ ಚಿನ್ನದ ಕಾಸಿ ತಾಳಿ ಸರ, 73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 6 ಗ್ರಾಂ ತೂಕದ ಚಿನ್ನದ 3 ತಾಳಿ, 64 ಗ್ರಾಂ ತೂಕದ ಚಿನ್ನದ ನೆಕ್‌ಲೇಸ್, 8 ಗ್ರಾಂ ತೂಕದ ಚಿನ್ನದ ಚೈನ್ ಕಳವಾಗಿದ್ದು ಇದರ ಅಂದಾಜು ಬೆಲೆ ₹ 21.12 ಲಕ್ಷ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮಡಿ ಶಂಕರ ಖಾರ್ವಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo