*
ಬೈಂದೂರು: ಕಸ್ತೂರಿ ರಂಗನ್ ಅವೈಜ್ಞಾನಿಕ ವರದಿ ವಿರೋಧಿಸಿ ವಿಧಾನ ಪರಿಷತ್ ಉಪಚುನಾವಣೆ ಬಹಿಷ್ಕಾರಕ್ಕೆ ಬೈಂದೂರು ತಾಲೂಕು ಜಡ್ಕಲ್ ಗ್ರಾಮ ಪಂಚಾಯತ್ ಸದಸ್ಯರು ತೀರ್ಮಾನಿಸಿದ್ದಾರೆ.
ಕಸ್ತೂರಿ ರಂಗನ್ ಅವೈಜ್ಞಾನಿಕ ವರದಿ ವಿರೋಧಿಸಿ ಉಡುಪಿ ದಕ್ಷಿಣ ಕನ್ನಡ ವಿಧಾನ ಪರಿಷತ್ತಿಗೆ ತೆರವಾಗಿರುವ ಸ್ಥಾನಕ್ಕೆ ಅಕ್ಟೋಬರ್ 21ರಂದು ನಡೆಯವ ಉಪ ಚುನಾವಣೆ ಬಹಿಷ್ಕಾರಕ್ಕೆ ಜಡ್ಕಲ್ ಗ್ರಾಮ ಪಂಚಾಯತ್ ಸದಸ್ಯರು ಕರೆ ನೀಡಿದ್ದಾರೆ.
ಪ್ರಮುಖವಾಗಿ ಪರಿಸರ ಸೂಕ್ಷ್ಮ ಪ್ರದೇಶ ಬಫರ್ ಝೋನ್ ಅನ್ನು ಶೂನ್ಯಕ್ಕೆ ಇಳಿಸುವುದು ಮತ್ತು ಈಗಾಗಲೇ ಹೊರಡಿಸಿರುವ ಸುತ್ತೋಲೆಯನ್ನು ಮುಖಾಂಬಿಕಾ ಅಭಯಾರಣ್ಯದ ಸೂಕ್ಷ್ಮ ಪ್ರದೇಶ ಎಂಬ ನೆಪದಲ್ಲಿ ಸಕ್ಷಮ ಪ್ರಾಧಿಕಾರದಿಂದ ವಾಣಿಜ್ಯ ಭೂ ಪರಿವರ್ತನೆಗೆ ಪೂರ್ವಾನುಮತಿಯನ್ನು ಪಡೆಯುವ ಸೂಚನೆ ರದ್ದುಗೊಳಿಸುವ ಬೇಡಿಕೆಯನ್ನು ಮುಂದಿಟ್ಟು ಮುಂಬರುವ ವಿಧಾನ ಪರಿಷತ್ ಉಪಚುನಾವಣೆ ಬಹಿಷ್ಕಾರಕ್ಕೆ ಜಡ್ಕಲ್‌ನ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ