Slider

ಕಿರಿಮಂಜೇಶ್ವರ:- ಪಾದಾಚಾರಿ ಮಹಿಳೆಗೆ ಬಸ್ ಡಿಕ್ಕಿ - ಮಹಿಳೆ ಸಾವು

Udupi


ಬೈಂದೂರು : ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ಕಿರೀಮಂಜೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಬೈಂದೂರು ಪೊಲೀಸರು, ಹೈವೆ ಪೊಲೀಸ್, ಹೆದ್ದಾರಿ ಪ್ರಾಧಿಕಾರದ ಗಸ್ತು ವಾಹನ,. ಬೈಂದೂರು ವೃತ್ತ ನಿರೀಕ್ಷಕ ಸವಿತ್ರ ತೇಜ್, ಬೈಂದೂರು ಪೊಲೀಸ್ ಅಧಿಕಾರಿ ಮಹೇಶ್ ಮೊದಲಾದವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಬೈಂದೂರು ನ್ಯಾಷನಲ್ ಆಂಬ್ಯುಲೆನ್ಸ್ ಪ್ರವೀಣ್ ಆಚಾರಿ, ನತರ್ ನಾಗೂರು, 24x7 ಇಬ್ರಾಹಿಂ ಗಂಗೊಳ್ಳಿ, ಸಮೀರ್ ಕಿರಿಮಂಜೇಶ್ವರ ಜೊತೆಗೂಡಿ ಶವವನ್ನು ಗೌರವಯುತವಾಗಿ ಪ್ಯಾಕ್ ಮಾಡಿ ನ್ಯಾಷನಲ್ ಆಂಬ್ಯುಲೆನ್ಸ್ ಮೂಲಕ ಬೈಂದೂರಿನ ಶವಾಗಾರಕ್ಕೆ ಕಳುಹಿಸಿಕೊಟ್ಟರು.








0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo