ಮಲ್ಪೆ: ಉಡುಪಿ ನಗರದ ಮಲ್ಪೆ ಬಂದರಿಗೆ ಬೋಟಿನಲ್ಲಿ ಮಲಗಲು ಹೋದ ವ್ಯಕ್ತಿ ಬೆಳಗ್ಗೆ ದಕ್ಕೆ ನೀರಿನಲ್ಲಿ ಮಗುಚಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಸಾವನ್ನಪ್ಪಿದವರು ಕೊಡವೂರು ಗ್ರಾಮದ ಸುರೇಶ್ (46) ಎಂದು ತಿಳಿಯಲಾಗಿದೆ.
ಅವರು ರಾತ್ರಿ ಮನೆಯಲ್ಲಿ ಊಟ ಮಾಡಿ ಬೋಟಿನಲ್ಲಿ ಮಲಗಲು ಹೋಗಿದ್ದರು. ಬೆಳಗ್ಗೆ ನೋಡುವಾಗ ಸುರೇಶ್ ಅವರ ಚಪ್ಪಲಿ ಮಾತ್ರ ಇತ್ತು. ಅವರ ಮೃತದೇಹ ನೀರಿನಲ್ಲಿ ಮಗುಚಿ ಬಿದ್ದ ಸ್ಥಿತಿಯಲ್ಲಿತ್ತು. ಬೋಟು ಹತ್ತುವಾಗ ಅಥವಾ ಇನ್ಯಾವುದೋ ಕಾರಣದಿಂದ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ