ಭಾರತದಲ್ಲಿ 1950ರಿಂದ 2015ರ ಅವಧಿಯಲ್ಲಿ ಬಹು ಸಂಖ್ಯಾತರಾಗಿರುವ ಹಿಂದೂ ಜನಸಂಖ್ಯೆಯಲ್ಲಿ ಶೇ.7.8 ರಷ್ಟು ಕುಸಿತವಾಗಿದ್ದರೆ, ಅಲ್ಪ ಸಂಖ್ಯಾತರ ಜನಸಂಖ್ಯೆ ಹೆಚ್ಚಳವಾಗಿದೆ. ಈ ಬಗ್ಗೆ ಪ್ರಧಾನಿಗಳ ಅರ್ಥಿಕ ಸಲಹಾ ಸಮಿತಿ (ಇಎಸಿ-ಪಿಎಂ)ಯ ಅಧ್ಯಯನ ವರದಿ ತಿಳಿಸಿದೆ.
ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 1950ರಲ್ಲಿ ಶೇ.84ರಿಂದ 2015ರಲ್ಲಿ ಶೇ.78 ಕ್ಕೆ ಕಡಿಮೆಯಾಗಿದೆ. ಆದರೆ ಮುಸ್ಲಿಮರ ಸಂಖ್ಯೆ ಅದೇ ಅವಧಿಯಲ್ಲಿ (65ವರ್ಷಗಳಲ್ಲಿ) ಶೇ.9.84ರಿಂದ ಶೇ.14.09 ಏರಿಕೆ ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಜಾಗತಿಕ ಪ್ರವೃತ್ತಿಯನ್ನು ಪರಿಗಣಿಸುವುದಾದರೆ, ವಿಶ್ವದ 167ರಾಷ್ಟ್ರಗಳಲ್ಲೂ ಬಹುಸಂಖ್ಯಾತರ ಜನ ಸಂಖ್ಯೆಯಲ್ಲಿ ಕುಸಿತವಾಗಿದೆ ಎಂದು ವರದಿ ತಿಳಿಸಿದೆ. ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿಯ ಅಧ್ಯಯನ ವರದಿಯ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಲ ನೀಡಲಿದೆ. ಯಾಕೆಂದರೆ ನೆರೆಯ ರಾಷ್ಟ್ರಗಳಲ್ಲಿ ಬಹುಸಂಖ್ಯಾತರ ಜನಸಂಖ್ಯೆಯ ಪಾಲು ಹೆಚ್ಚುತ್ತಿರುವ ಪರಿಣಾಮ, ಅಲ್ಪಸಂಖ್ಯಾತರಾದ ಹಿಂದೂಗಳು, ಸಿಕ್ಟರು ಮತ್ತು ಕ್ರೈಸ್ತರು ಆಶ್ರಯಕ್ಕಾಗಿ ಭಾರತಕ್ಕೆ ವಲಸೆ. ಬರುತ್ತಿದ್ದಾರೆ. ಅವರಿಗೆ ತ್ವರಿತವಾಗಿ ಪೌರತ್ವ ನೀಡುವುದು ಅತ್ಯಗತ್ಯವಾಗಿದೆ. 2019ರಲ್ಲಿ ಜಾರಿಗೆ ತಂದ ಸಿಎಎಗೆ ಎರಡು ತಿಂಗಳ ಹಿಂದಯಷ್ಟೇ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಭಾರತದಲ್ಲಿ ಬಹುಸಂಖ್ಯಾತರ ಜನಸಂಖ್ಯೆಯಲ್ಲಿ ಕುಸಿತವಾಗಿದ್ದರೆ, ಇದಕ್ಕೆ ವಿರುದ್ಧವಾಗಿ ನೆರೆಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿರುವ ಬಹುಸಂಖ್ಯಾತರ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 1950-2015ರ ಅವಧಿಯಲ್ಲಿ ಭಾರತದ ಮುಸ್ಲಿಮರ ಪಾಲು ಶೇ.43.15, ಕ್ರೈಸ್ತರು 5.38, ಸಿಕ್ಚರ ಪಾಲು ಶೇ.6.58 ರಷ್ಟುಏರಿಕೆಯಾಗಿದೆ. ಬೌದ್ಧರ ಸಂಖ್ಯೆಯಲ್ಲಿ ತುಸು ಏರಿಕೆಯಾದ್ದರೆ, ಜೈನ ಮತ್ತು ಪಾರ್ಸಿ ಸಂಖ್ಯೆ ಕುಸಿತವಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ