Slider

ನಾಳೆ ಬೆಳಿಗ್ಗೆ 10:30ಕ್ಕೆ SSLC ಫಲಿತಾಂಶ ಪ್ರಕಟ

SSLC results Karnataka kseeb Karnataka state SSLC results


ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು 2024ನೇ ಸಾಲಿನ ಎಸ್‌ಎಸ್‌ಎಲ್ಸಿ ಫಲಿತಾಂಶವನ್ನು ನಾಳೆ ಬೆಳಗ್ಗೆ 10.30 ಗಂಟೆಗೆ ಪ್ರಕಟಿಸಲಿದೆ.

ರಾಜ್ಯಾದ್ಯಂತ 10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೆಎಸ್‌ಇಎಬಿ 10 ನೇ ತರಗತಿ ಫಲಿತಾಂಶಗಳನ್ನು ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್ಸೈಟ್ನಲ್ಲಿ karresults.nic.in ನಲ್ಲಿ ಪರಿಶೀಲಿಸಬಹುದು.

ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ: 09.05.2024 ರಂದು ಬೆಳಗ್ಗೆ 10.30 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, tonttech-560003. ಇಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ. ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ದಿನಾಂಕ:09.05.2024ರ ಬೆಳಗ್ಗೆ 10.30 ಗಂಟೆಯ ನಂತರ ವೀಕ್ಷಿಸಬಹುದಾಗಿದೆ.

ಈ ರೀತಿ ರಿಸಲ್ಟ್ ಚೆಕ್ ಮಾಡಿ

ಇಲಾಖೆಯ ಅಧಿಕೃತ ವೆಬ್ಸೈಟ್ಗಳಾದ kseab.karnataka.gov.in ಮತ್ತು karresults.nic.in ಗಳಲ್ಲಿ ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು ಅವಕಾಶವಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ತಿಳಿಸಿದೆ.










0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo