Slider

ಉಡುಪಿ:- ನಿರಂತರ CNG ಇಂಧನ ಪೂರೈಕೆಗೆ ಕೇಂದ್ರ ಸರ್ಕಾರಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಮನವಿ.

Cngpeoblem in Udupi

 


ಉಡುಪಿ:- ಉಡುಪಿ ಜಿಲ್ಲೆಯಾದ್ಯಂತ ಸಿ ಎನ್ ಜಿ ಬಂಕ್ ಗಳಲ್ಲಿ ಇಂಧನ ಕೊರತೆಯಿಂದ ರಿಕ್ಷಾ ಚಾಲಕರು ಗಂಟೆಗಟ್ಟಲೆ ಇಂಧನಕ್ಕಾಗಿ ಕಾಯುವ ಸನ್ನಿವೇಶ ನಿರ್ಮಾಣವಾಗಿದ್ದು, ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಉಡುಪಿ ಜಿಲ್ಲೆಗೆ ನಿರಂತರ ಸಿ ಎನ್ ಜಿ ಪೂರೈಕೆಗೆ ಕ್ರಮ ವಹಿಸುವಂತೆ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸಾವಿರಕ್ಕೂ ಮಿಕ್ಕಿ ಆಟೋಗಳು ಹಾಗೂ ಇತರ ವಾಹನಗಳು ಸಿ ಎನ್ ಜಿ ಇಂಧನವನ್ನೇ ಅವಲಂಬಿಸಿದ್ದು, ಇಂಧನ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ.ದಿನೇ ದಿನೇ ಸಿ ಎನ್ ಜಿ ಆಧಾರಿತ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದರೂ, ಸಿ ಎನ್ ಜಿ ತುಂಬುವ ಬಂಕ್ ಗಳ ಕೊರತೆಯಿಂದ ವಾಹನ ಮಾಲಕರು, ಆಟೋ ಚಾಲಕರು ಬಾಡಿಗೆ ಬಿಟ್ಟು ಬಂಕ್ ಗಳ ಮುಂದೆ ಕಾಯುವ ಪರಿಸ್ಥಿತಿ ಎದುರಾಗಿದೆ. ಶೀಘ್ರದಲ್ಲಿಯೇ ಪೆಟ್ರೋಲಿಯಂ ಸಚಿವಾಲಯದ ಸಚಿವರು ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo