ಶಿವಮೊಗ್ಗದಲ್ಲಿ ಇಂದು ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಜೊತೆ ವೇದಿಕೆ ಹಂಚಿಕೊಂಡ ನಟ ಶಿವರಾಜ್ ಕುಮಾರ್ ತಾನು ರಾಹುಲ್ ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವರಾಜ್ ಕುಮಾರ್ ಪತ್ನಿ ಗೀತಾ ಸ್ಪರ್ಧಿಸುತ್ತಿದ್ದಾರೆ.
ಈ ವೇಳೆ ಶಿವರಾಜ್ ಕುಮಾರ್ ಕೂಡಾ ಕಾಂಗ್ರೆಸ್ ನಾಯಕರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ತಾನು ರಾಹುಲ್ ಗಾಂಧಿಯವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆಯೂ ಶಿವಣ್ಣ ಇದೇ ಮಾತು ಹೇಳಿದ್ದರು.
'ಇಂತಹ ದೊಡ್ಡ ನಾಯಕರ ಜೊತೆ ವೇದಿಕೆ ಹಂಚಿಕೊಳ್ಳುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಹಲವು ಸಂದರ್ಭದಲ್ಲಿ ಹೇಳಿದ್ದೇನೆ. ನಾನು ರಾಹುಲ್ ಗಾಂಧಿಯವರ ಅಭಿಮಾನಿ. ಅವರ ಫಿಟ್ನೆಸ್ ಗೆ, ಮಾನವೀಯತೆಗೆ ದೊಡ್ಡ ಅಭಿಮಾನಿ. ಯಾವ ಮನುಷ್ಯ ಫಿಟ್ ಆಗಿರ್ತಾನೋ ಅವನು ದೇಶದಲ್ಲಿ ಸ್ಟ್ರಿಕ್ಟ್ ಆಗಿರುತ್ತಾನೆ' ಎಂದು ರಾಹುಲ್ ರನ್ನು ಹಾಡಿಹೊಗಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ