Slider

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ:- ಪ್ರಮುಖ ಆರೋಪಿ ಮುಸ್ತಫಾ ಪೈಚಾರು ಎನ್.ಐ.ಎ ವಶಕ್ಕೆ

Praveen nettaru murder case accused arrested by nia

 


ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆಯ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಎನ್‌ಐಎ ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ಮುಸ್ತಫಾ ಪೈಚಾರು ಎಂದು ಗುರುತಿಸಲಾಗಿದ್ದು. ಪ್ರವೀಣ್ ನೆಟ್ಟಾರು ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಕಲೇಶಪುರದಲ್ಲಿ ಎನ್‌ಐಎ ತಂಡ ವಶಕ್ಕೆ ಪಡೆದಿದೆ.

ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಮುಖ ಆರೋಪಿಯಾಗಿದ್ದ ಮುಸ್ತಫಾ ಪೈಚಾರು ಸುಳಿವು ನೀಡಿದವರಿಗೆ 5 ಲಕ್ಷ ಹಣ ನೀಡುವುದಾಗಿ ಎನ್‌ಐಎ ಘೋಷಿಸಿತ್ತು. ಇದೀಗ ಆರೋಪಿಯನ್ನು ಇಂದು ಬೆಳಿಗ್ಗೆ ಸಕಲೇಶಪುರದಲ್ಲಿ ಎನ್‌ಐಎ ಅರೆಸ್ಟ್ ಮಾಡಿದೆ.

2022 ಜೂನ್ 26 ರಂದು ನಡೆದಿದ್ದ ಬಿಜೆಪಿಯ ಯುವಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಬೆಳ್ಳಾರೆಯ ಕೋಳಿ ಅಂಗಡಿ ಮುಚ್ಚಿ ಮನೆಗೆ ಹೊರಡುತ್ತಿದ್ದ ಸಮಯದಲ್ಲಿ ಬೈಕಿನಲ್ಲಿ ಬಂದ ಕಿಡೇಗಿಡಗಳು ಕೊಲೆ ಮಾಡಿದ್ದರು. ಘಟನೆ ಬಗ್ಗೆ ಇಡೀ ರಾಜ್ಯದಲ್ಲಿ ಆಕ್ರೋಶ ಕೇಳಿ ಬಂದ ಹಿನ್ನಲೆ ರಾಜ್ಯ ಸರಕಾರ ಎನ್‌ಐಎಗೆ ಪ್ರಕರಣದ ತನಿಖೆಗೆ ವಹಿಸಿತ್ತು.








0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo