Slider

ಭಟ್ಕಳದಲ್ಲಿ ಆಳ‌ ಸಮುದ್ರದಲ್ಲಿ ಕಿಡ್ನ್ಯಾಪ್ ಮಾಡಲ್ಪಟ್ಟಿದ್ದ ಮೀನುಗಾರರನ್ನು ರಕ್ಷಿಸಿದ ಮಲ್ಪೆ ಪೊಲೀಸರು - ಅಪರಿಚಿತರ ತಂಡಕ್ಕಾಗಿ ಪೊಲೀಸರ ಶೋಧ

 


ಉಡುಪಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕಾ ಬೋಟ್ ಮತ್ತು ಮೀನುಗಾರರನ್ನು ಕಿಡ್ನ್ಯಾಪ್ ಮಾಡಿದ್ದ ಪ್ರಕರಣವನ್ನು ಮಲ್ಪೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಫೆಬ್ರವರಿ 19 ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗಾಗಿ ಕೃಷ್ಣನಂದನ ಹೆಸರಿನ ಆಳ ಸಮುದ್ರ ಬೋಟ್ ತೆರಳಿದ್ದು, ಫೆಬ್ರವರಿ 27 ರಂದು ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ಆಳ ಸಮುದ್ರದಲ್ಲಿ ಬೆಳಗ್ಗಿನ ಜಾವ 3 ಗಂಟೆಗೆ ಕೆಟ್ಟು ನಿಂತಿತ್ತು.

ಈ ಸಮಯದಲ್ಲಿ ಅಪರಿಚಿತ ಬೋಟ್ ನಲ್ಲಿ ಬಂದಿದ್ದ 25 ಜನರಿದ್ದ ತಂಡ ಕೆಟ್ಟು ನಿಂತಿದ್ದ ಕೃಷ್ಣನಂದನ ಬೋಟ್ ಮೇಲೆ ದಾಳಿ ನಡೆಸಿ ಬೋಟ್‌ನಲ್ಲಿದ್ದ ಎಂಟು ಲಕ್ಷ ರೂಪಾಯಿ ಮೌಲ್ಯದ ಮೀನು ಮತ್ತು 7500 ಲೀಟರ್‌ ಡೀಸೆಲ್‌ ಅ‌ನ್ನು ದರೋಡೆ ಮಾಡಿತ್ತು.

ಬೋಟ್ ಕಿಡ್ನ್ಯಾಪ್ ಮಾಡಿರುವ ಮಾಹಿತಿ ತಿಳಿಯುತ್ತಲೇ ಬೋಟ್ ಮಾಲಕರ ಜೊತೆ ಭಟ್ಕಳಕ್ಕೆ ತೆರಳಿದ್ದ ಮಲ್ಪೆ ಪೊಲೀಸರು ಕೂಡಿ ಹಾಕಲ್ಪಟ್ಟಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.











ಆಳ ಸಮುದ್ರದಲ್ಲಿ ದರೋಡೆ ಮತ್ತು ಕಿಡ್ನ್ಯಾಪ್‌ ಮಾಡಿದ ಅಪರಿಚಿತ ತಂಡಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo