ಮಣಿಪಾಲ: ಹೊಸ ವರ್ಷದ ಆಚರಣೆಯ ಸಂದರ್ಭ ಕಾರು ಮತ್ತು ಮೋಟಾರ್ ಸೈಕಲ್ ಗಳನ್ನುರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ವರ್ತಿಸಿದ ಪ್ರಕರಣದಲ್ಲಿ 01 ಕಾರು ಮತ್ತು 08 ಮೋಟಾರ್ ಸೈಕಲ್ ಗಳನ್ನು ಮಣಿಪಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ರಾಘವೇಂದ್ರ ಸಿ ರವರು ಸಿಬ್ಬಂದಿಯವರೊಂದಿಗೆ ದಿನಾಂಕ 01.01.2024 ರಂದು 00:30 ಗಂಟೆ ಹೊಸ ವರ್ಷದ ಪ್ರಯುಕ್ತ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಣಿಪಾಲದ ರಸ್ತೆಯಲ್ಲಿ ಸುಮಾರು 7 ರಿಂದ 10 ಜನರು ಕಾರು ಹಾಗೂ ದ್ವಿ ಚಕ್ರ ವಾಹನಗಳಲ್ಲಿ ಸವಾರಿ ಮಾಡಿಕೊಂಡು ಬಂದು ಅಕ್ರಮ ಕೂಟ ಸೇರಿಕೊಂಡು ಮೋಟಾರ್ ಸೈಕಲ್ ನ ಸೈಲೆನ್ಸರ್ ನಲ್ಲಿ ಬೆಂಕಿಯ ಕಿಡಿ ಬರುವ ರೀತಿಯಲ್ಲಿ ಅಪಾಯಕಾರಿಯಾಗಿ ದುಡುಕುತನ ಹಾಗೂ ನಿರ್ಲಕ್ಷ್ಯತೆಯಿಂದ ಚಾಲನೆ ಮಾಡಿಕೊಂಡು ಇತರೆ ವಾಹನಗಳ ಸವಾರರ ಜೊತೆ ಬಂದು ರಸ್ತೆಯ ಮದ್ಯದಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಬೊಬ್ಬೆಯೊಡೆದು ಕುಣಿದು ಕುಪ್ಪಳಿಸುತ್ತಾ ತಕ್ಷೀರು ನಡೆಸುವ ಸಮಾನ ಉದ್ದೇಶದಿಂದ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿ ರಸ್ತೆಯ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದು ಈ ಘಟನೆಗೆ ಸಂಬಂದಪಟ್ಟಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2024 ಕಲಂ: 143, 147, 279, 290 ಜೊತೆಗೆ 149 ಐ ಪಿ ಸಿ ಯಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.
ಈ ಪ್ರಕರಣದಲ್ಲಿ ಆರೋಪಿತರ ಪತ್ತೆ ಬಗ್ಗೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕರಾದ ದೇವರಾಜ ಟಿ ವಿ ರವರ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರಾದ ರಾಘವೆಂದ್ರ ಸಿ, ಅಕ್ಷಯಾ ಕುಮಾರಿ ಎಸ್ ಎನ್, ಪ್ರೊ ಪಿ ಎಸ್ ಐ ಲೋಹಿತ್, ಎ ಎಸ್ ಐ ವಿವೇಕಾನಂದ, ಅಬ್ದುಲ್ ರಜಾಕ್, ಪ್ರಸನ್ನ, ಇಮ್ರಾನ್, ಮಂಜುನಾಥ ಎಂ ಆರ್, ಚನ್ನೇಶ್ ಕೆ ಹೆಚ್, ಬಸವರಾಜ್ ಬಶೆಟ್ಟಿ, ರವರನ್ನೊಳಗೊಂಡ ತಂಡ ಘಟನೆಗೆ ಸಂಬಂದಿಸಿದ ಸಾಮಾಜಿಕ ಜಾಲತಾಣದ ವಿಡಿಯೋ ದೃಶ್ಯಾವಳಿಗಳನ್ನು ಪರೀಶೀಲಿಸಿ ಆರೋಪಿಗಳ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂದಪಟ್ಟ ವಾಹನಗಳನ್ನು ಪತ್ತೆ ಮಾಡಿದ್ದು ಅದರಲ್ಲಿ 1 ಕಾರು ಹಾಗೂ 08 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ, 14 ಜನ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ತನಿಖೆ ಕೈಗೊಂಡಿರುತ್ತದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ