ಉಡುಪಿಯಲ್ಲಿ ನಟೋರಿಯಸ್ ಕಚ್ಚಾ ಬನಿಯನ್ ಗ್ಯಾಂಗ್ ರಸ್ತೆಗೆ ಇಳಿದಿದೆ. ಈ ಗ್ಯಾಂಗ್ ಉಡುಪಿ ನಗರದ ಜನರ ನಿದ್ದೆಗೆಡಿಸಿದ್ದು, ಪೊಲೀಸರಿಗೆ ಗ್ಯಾಂಗ್ ಸವಾಲಾಗಿದೆ. ವಿಚಿತ್ರವಾಗಿ ಬಂದು ವಿಲಕ್ಷಣ ರೀತಿಯಲ್ಲಿ ಕಳ್ಳತನ ನಡೆಸುವ ಗ್ಯಾಂಗ್ ಹಿನ್ನಲೆಗೆ ಜನ ಭಯಭೀತರಾಗಿದ್ದಾರೆ.
ಈ ಕಳ್ಳರ ಗ್ಯಾಂಗ್ ಕೈ-ಮೈಗೆ ಗ್ರೀಸ್ ಎಣ್ಣೆ ಹಚ್ಚಿ ಕಳ್ಳತನಕ್ಕೆ ಇಳಿಯುತ್ತದೆ. ಕೇವಲ ಚಡ್ಡಿಯಲ್ಲೇ ಬರುವ ತಂಡ ಈಗಾಗಲೇ ಉಡುಪಿಯ ಸಂತೆ ಕಟ್ಟೆ , ಕಲ್ಯಾಣಪುರ ಭಾಗದಲ್ಲಿ ಕಳ್ಳತನ ನಡೆಸಿದೆ. ಕಳವು ಮಾಡಿ ಮನೆಯಲ್ಲೇ ಚಪ್ಪಲ್ ಬಿಟ್ಟು ಹೋಗುತ್ತದೆ. ಸಿಸಿಟಿವಿ ಲೆಕ್ಕಿಸದೆ ಮಾಸ್ಕ್ ಧರಿಸಿ ಕೈಚಳಕ ತೋರಿಸುವ ಚೋರರ ವಿಚಿತ್ರ ಕೃತ್ಯ ಜನರನ್ನು ಆತಂಕಕ್ಕೆ ದೂಡಿದೆ.
ಈಶಾನ್ಯ ಭಾರತದಲ್ಲಿ ಇಂತಹದೇ ಗ್ಯಾಂಗ್ ಚಾಲ್ತಿಯಲ್ಲಿದೆ. 1990-91ನೇ ಇಸಯಿಯಲ್ಲಿ ಈಶಾನ್ಯ ಭಾರತದಲ್ಲಿ ಪಾತಕ ಕೃತ್ಯಕ್ಕೆ ಈ ಗ್ಯಾಂಗ್ ಹುಟ್ಟಿಕೊಂಡಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಾತಕ ಕೃತ್ಯಗಳನ್ನು ಮಾಡುತ್ತಿದ್ದ ಗ್ಯಾಂಗ್ ಕೊಲೆ, ದರೋಡೆ, ಕಳ್ಳತನ ಮಾಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರು. ಡೆಲ್ಲಿ ಕ್ರೈಮ್-2 ವೆಬ್ ಸಿರೀಸ್‌ನಲ್ಲಿ ಈ ಕಚ್ಚಾ ಗ್ಯಾಂಗ್‌ನ ಪಾತಕ ಕೃತ್ಯಗಳನ್ನು ಆಧರಿಸಿ ತೋರಿಸಲಾಗಿದೆ. ಬರೀ ಮೈಲಿ ಬರುವ ತಂಡ ಮೈಯಿಡೀ ಎಣ್ಣೆ ಹಚ್ಚಿಕೊಂಡು ಇರುತ್ತದೆ. ಸೊಂಟಕ್ಕೆ ಎರಡು ಚಪ್ಪಲಿ ಕಟ್ಟಿಕೊಂಡು ಬರುವ ತಂಡ ಕೃತ್ಯ ನಡೆದ ಬಳಿಕ ಒಂದು ಚಪ್ಪಲಿಯನ್ನು ಬಿಟ್ಟು ಪರಾರಿಯಾಗುತ್ತದೆ.
ಸದ್ಯ ಈ ಗ್ಯಾಂಗ್ ಉಡುಪಿ ಪೊಲೀಸರ ನಿದ್ದೆಗೆಡಿಸಿದ್ದು ಕಳ್ಳರ ಪತ್ತೆಗೆ ವಿಶೇಷ ಪೊಲೀಸರ ತಂಡ ರಚನೆ ಮಾಡಲಾಗಿದೆ. ಉಡುಪಿ ಎಸ್ಪಿ ಡಾ ಆರುಣ್ ಕುಮಾರ್ ಮಾರ್ಗದರ್ಶನ ಕಳ್ಳರ ಪತ್ತೆಗೆ ಆರು ಮಂದಿಯ ಪೊಲೀಸರ ತಂಡ ನಿಯೋಜಿಸಲಾಗಿದೆ. ರೆಸಿಡೆನ್ಸಿಯಲ್ ಏರಿಯಗಳನ್ನೇ ಗುರಿಯಾಗಿಸಿ ಕಳ್ಳತನ ನಡೆಸುವ ತಂಡ, ಉಡುಪಿ ಸಂತೆಕಟ್ಟೆ ಭಾಗದಲ್ಲಿ ರುವ ನವಮಿ ಬೇಕರಿ ಮಾಲೀಕರ ಮನೆ ಕೈಚಳಕ ತೋರಿಸಿತ್ತು. ದೇವರ ಮನೆಯಿಂದ ಎರಡು ವರೆ ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ದೇವರ ಸಾಮಾಗ್ರಿ ದೋಚಿ ಪರಾರಿಯಾಗಿತ್ತು.
ಪೊಲೀಸರಿಗೆ ಈ ಗ್ಯಾಂಗ್‌ನ ಬಗ್ಗೆ ಮಾಹಿತಿಯೂ ಅಸ್ಪಷ್ಟವಾಗಿದೆ. ಗ್ಯಾಂಗ್‌ನಲ್ಲಿರುವ ಕಳ್ಳರ ಸಂಖ್ಯೆ ಬಗ್ಗೆ ಪೊಲೀಸರಿಗೂ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಕಳ್ಳರು ಬಳಸುವ ಮಾರ್ಗಗಳು, ಅವರ ಊರು, ಆಯುಧ, ಉಪಯೋಗಿಸುವ ವಾಹನಗಳ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ