ಮಂಗಳೂರು: ಕಾರು ಪಾರ್ಕ್ ಮಾಡುತ್ತಿದ್ದ ವೇಳೆ ಹಿಂಬಾಲಿಸಿ ಬಂದ ಪುಟ್ಟ ಕಂದಮ್ಮ ಚಕ್ರದಡಿ ಸಿಲುಕಿ ಮೃತಪಟ್ಟ ಘಟನೆ ಮಂಗಳೂರು ಗಡಿಭಾಗದ ಕಾಸರಗೋಡಿನ ಉಪ್ಪಳದ ಸೋಂಕಾಲ್ ಬಳಿ ನಡೆದಿದೆ.
ಸೋಂಕಾಲ್ ನಿವಾಸಿ ನಿಝಾರ್ ತಸ್ರೀಫಾ ಎಂಬುವವರ ಒಂದೂವರೆ ವರ್ಷದ ಪುತ್ರ ಮಸ್ತುಲ್ ಜಿಶಾನ್ ದುರ್ಮರಣ ಹೊಂದಿದ್ದಾನೆ. ಮನೆಯ ಪಾರ್ಕಿಂಗ್ ಜಾಗದಲ್ಲಿ ಜಿಶಾನ್ ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದ. ಇದೇ ವೇಳೆ ಜಿಶಾನ್‌ನ ಚಿಕ್ಕಪ್ಪ ಹೊರಗಿದ್ದ ಕಾರನ್ನು ಮನೆಯೊಳಗೆ ತಂದು ಪಾರ್ಕಿಂಗ್ ಮಾಡಲು ಮುಂದಾಗಿದ್ದರು.
ಕಾರು ಬರುವುದನ್ನು ಕಂಡ ಕೂಡಲೇ ಓಡಿ ಬಂದ ಮಗು ಕಾರಿನ ಮುಂದೆ ಬಂದು ನಿಂತಿತ್ತು. ಆದರೆ ಇದು ತಿಳಿಯದೆ ಕಾರನ್ನು ಹಿಂದೆ ತೆಗೆದು ಮುಂದೆ ಬಂದಿದ್ದಾರೆ. ಈ ವೇಳೆ ಕಾರಿನ ಮುಂಭಾಗದ ಚಕ್ರ ಮಗುವಿನ ಮೈಮೇಲೆ ಹರಿದಿದೆ. ಈ ದೃಶ್ಯ ಮನೆಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡಲೇ ಮಗುವಿನ ಚಿಕ್ಕಪ್ಪ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ