ಮಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ನಗರದ ಎಜೆ ಸಂಸ್ಥೆಯ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಕೃತಿ ಶೆಟ್ಟಿ (20 ವರ್ಷ) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಸೋಮವಾರ ಬೆಳಗ್ಗಿನ ಜಾವಾ 3 ಗಂಟೆ ಸುಮಾರಿಗೆ ಮಹಿಳಾ ಹಾಸ್ಟೆಲ್ ನ ಆರನೇ ಮಹಡಿಯಿಂದ ಜಿಗಿದು ಪ್ರಕೃತಿ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಜೀವನದಲ್ಲಿ ಹತಾಶೆಗೊಂಡು ಈ ಕೃತ್ಯ ನಡೆಸಿರುವುದಾಗಿ ಬರೆಯಲಾಗಿದೆ. ಕೃತಿ ಶೆಟ್ಟಿ ಬೆಳಗಾವಿಯ ಅಥಣಿ ಮೂಲದವಳು. ಕಾಲೇಜಿಗೆ ರಜೆ ಸಿಕ್ಕಿದ್ದರೂ ಊರಿಗೆ ತೆರಳದೆ ಹಾಸ್ಟೆಲ್‌ನಲ್ಲೇ ಇದ್ದಳು.
ಡೆತ್‌ನೋಟ್‌ನಲ್ಲೇನಿತ್ತು?
ದಪ್ಪ ಇದ್ದೀನಿ.. ನೋಡೋಕೆ ಚೆನ್ನಾಗಿ ಕಣ್ತಾ ಇಲ್ಲ. ಎಂಬಿಬಿಎಸ್ ಮುಗಿಸಬೇಕು ಅಂತಾ ತುಂಬಾ ಆಸೆ ಇತ್ತು. ಆದರೆ ನನ್ನ ಸೌಂದರ್ಯಕ್ಕೆ ದಪ್ಪ ಅನ್ನೋದು ಅಡ್ಡಿಯಾಗಿದೆ. ತೂಕ ಇಳಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ಆಗಲಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಳು ಎನ್ನಲಾಗಿದೆ.
ಕದ್ರಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದು ತನಿಖೆ ಮುಂದುವರೆದಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ