Slider

ಉಡುಪಿ: ಆಟವಾಡುತ್ತಿದ್ದ ಮಗುವಿನ ಮೇಲೆ ಗೇಟ್ ಬಿದ್ದು ಮಗು ಸಾವು

 

ಉಡುಪಿ: ಗೆಸ್ಟ್ ಹೌಸ್ ನ ಗೇಟ್ ಒಂದು ಪುಟ್ಟ ಮಗುವಿನ ಮೇಲೆ ಬಿದ್ದ ಪರಿಣಾಮ ಮಗು ಸಾವನಪ್ಪಿದ ಘಟನೆ ಕೋಟತಟ್ಟು ಪಡುಕರೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.ಮೃತ ಮಗುವನ್ನು ಸ್ಥಳೀಯ ನಿವಾಸಿ ಸುಧೀರ್‌ ಮೊಗವೀರ ಅವರ ಏಕೈಕ ಪುತ್ರ ಮೂರು ವರ್ಷದ ಸುಶಾಂತ್‌ (3) ಎಂದು ಗುರುತಿಸಲಾಗಿದೆ.

ಮನೆಯ ಸಮೀಪದಲ್ಲಿರುವ ಗೆಸ್ಟ್‌ಹೌಸ್‌ನ ಗೇಟ್‌ನಲ್ಲಿ ಈ ಮಗು ಪ್ರತಿದಿನ ಆಟವಾಡುತ್ತಿದ್ದು ಅದರಂತೆ ಮಂಗಳವಾರ ಆಡುತ್ತಿದ್ದಾಗ ಗೇಟ್‌ ಕಳಚಿ ಮೈ ಮೇಲೆ ಬಿದ್ದಿತು. ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಮೃತಪಟ್ಟಿದೆ. ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.











0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo