Slider

ಸುರ್ಜೇವಾಲಾ, ವೇಣುಗೋಪಾಲ್‌ ಕಲೆಕ್ಷನ್ ಏಜೆಂಟರು: ರಾಜ್ಯ ಬಿಜೆಪಿ

 

ರಾಜ್ಯ ಬಿಜೆಪಿ ಮತ್ತೆ ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಸುರ್ಜೇವಾಲಾ ಹಾಗೂ ಕೆ.ಸಿ.ವೇಣುಗೋಪಾಲ್‌ರನ್ನು ಕಲೆಕ್ಷನ್‌ ಏಜೆಂಟರುಗಳೆಂದು ಕರೆದಿದೆ. ಅವರಿಬ್ಬರು ಬಂದಿದ್ದು ನಿಗಮ-ಮಂಡಳಿಗಳಿಗೆ ರೇಟ್‌ ಕಾರ್ಡ್‌ ಫಿಕ್ಸ್‌ ಮಾಡಲೆಂದು ಅಂತ ಬಿಜೆಪಿ ಟ್ವೀಟ್‌ ಮೂಲಕ ವ್ಯಂಗ್ಯ ಮಾಡಿದೆ.

ರಾಜ್ಯ ಬಿಜೆಪಿಯ ಟ್ವೀಟ್‌ನಲ್ಲೇನಿದೆ..?

ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್‌ನ ಕಲೆಕ್ಷನ್‌ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್‌ ಅವರು ನಿಗಮ ಮಂಡಳಿಗಳ ನೇಮಕಕ್ಕೆ ರೇಟ್‌ ಕಾರ್ಡ್‌ ಫಿಕ್ಸ್‌ ಮಾಡಿ ಹೋಗಿದ್ದಾರೆ.@INCKarnataka ಸ್ನೇಹಿತರು ಕೊಟ್ಟಿರುವ ನಿಗಮ ಮಂಡಳಿಗಳ ರೇಟ್‌ ಕಾರ್ಡ್ ಇಂತಿದೆ.

▪️ಬಿಡಿಎ - ₹50 ಕೋಟಿ

▪️ಬಿಡಬ್ಲೂಎಸ್‌ಎಸ್‌ಬಿ - ₹45 ಕೋಟಿ

▪️ಕೆಆರ್‌ಐಡಿಎಲ್ - ₹20 ಕೋಟಿ

▪️ಕಿಯೋನಿಕ್ಸ್ - ₹15 ಕೋಟಿ

▪️ಕರ್ನಾಟಕ ಉಗ್ರಾಣ ನಿಗಮ - ₹12 ಕೋಟಿ

▪️ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ - ₹10 ಕೋಟಿ

ಇನ್ನು ಹತ್ತು ಹಲವು ನಿಗಮಗಳಿಗೆ ಕಲೆಕ್ಷನ್‌ ಮಾಸ್ಟರ್ಸ್‌ಗಳಾದ

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಇನ್ನೂ ಹೆಚ್ಚು ಮೊತ್ತದ ಕಲೆಕ್ಷನ್‌ ಆಗುವ ಸಾಧ್ಯತೆ ಇದೆಯಂತೆ..! ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.








0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo