ಪಂಚರಾಜ್ಯಗಳ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸರಣಿ ಐಟಿ ದಾಳಿಗಳು ನಡೆದಿದ್ದು, ಬೆಂಗಳೂರಿನಿಂದಲೇ ರಾಜಸ್ಥಾನ ಚುನಾವಣೆಗೆ ಹಣ ಪೂರೈಕೆಯಾಗುತ್ತಿರುವ ವಿಷಯ ಧೃಡ ಪಟ್ಟಿದೆ. ಮಾಜಿ ಕಾರ್ಪೋರೇಟರ್ ಅಶ್ವತ್ಥಮ್ಮ - ಆಕೆಯ ಪತಿ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿರುವ 42 ಕೋಟಿ ರೂ.ಹಣ ಇದುವರೆಗಿನ ದಾಳಿಯಲ್ಲಿ ಅತಿಹೆಚ್ಚಿನ ಮೊತ್ತವಾಗಿದೆ.
ಅಂಬಿಕಾಪತಿ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು , ಇವರಿಗೆ ಸೇರಿದ ಬಿಲ್ಡರ್ ಒಬ್ಬರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮನೆಯ ಬೀಗದ ಕೀ ಕೊಡದೆ ಸತಾಯಿಸಿದ್ದ ಅಂಬಿಕಾಪತಿ, ತನ್ನ ಡ್ರೈವರ್ ಕೈಲಿ ಬೀಗದ ಚಾವಿಯನ್ನು ಕೊಟ್ಟು ಊರು ಬಿಡುವಂತೆ ಹೇಳಿದ್ದರು. ಆದರೆ ಐಟಿ ಅಧಿಕಾರಿಗಳು ಚಾಲಕನನ್ನೂ ಬಂಧಿಸಿ ಕೀ ವಶಕ್ಕೆ ಪಡೆದು ಪರಿಶೀಲಿಸಿದಾಗ ರಟ್ಟಿನ ಬಾಕ್ಸ್‌ಗಳಲ್ಲಿ 500 ರೂ. ಮುಖಬೆಲೆಯ 42 ಕೋಟಿ ರೂ. ಹಣ ಪತ್ತೆಯಾಗಿತ್ತು.
ಪ್ರಕರಣ ದಾಖಲಿಸಿಕೊಂಡಿರುವ ಐಟಿ ಮತ್ತು ಇಡಿ ಅಧಿಕಾರಿಗಳು ಆರೋಪಿಗಳಿಗೆ ನೋಟಿಸ್ ನೀಡಲು ಸಿದ್ದತೆ ನಡೆಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ