ಕಾಂಗ್ರೆಸ್‌ನ ಬಿಟ್ಟಿ ಭಾಗ್ಯಗಳ ಪರಿಣಾಮವೇ ಕರ್ನಾಟಕದ ಜನತೆ ಲೋಡ್ ಶೆಡ್ಡಿಂಗ್ ಎದುರಿಸುವಂತಾಗಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 200 ಯೂನಿಟ್ ಉಚಿತ ಕೊಟ್ಟ ಸರಕಾರಕ್ಕೆ ವಿದ್ಯುತ್ ಖರೀದಿಸಲು ದುಡ್ಡಿಲ್ಲ, ಬಳ್ಳಾರಿ ರಾಯಚೂರು ಥರ್ಮಲ್ ಪವರ್‌ಗಳಿಂದ ಜೆಸ್ಕಾಂ ವಿದ್ಯುತ್ ಖರೀದಿಸಲು ಹಣವಿಲ್ಲ. ಇದರಿಂದ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ ಎಂದರು.
ಇನ್ನು ಕಳೆದ ತಿಂಗಳು ರಾಜ್ಯದ ನ್ಯಾಯಾಧೀಶರಿಗೆ ವಾರ ತಡ ಮಾಡಿ ಸಂಬಳ ಕೊಟ್ಟರು. ಶಿಕ್ಷಕರು ಹಾಗೂ ಇತರ ನೌಕರರಿಗೆ 20 ದಿನ ತಡವಾಗಿ ಸಂಬಳ ಕೊಟ್ಟರು. ಅಧಿಕಾರಕ್ಕೆ ಬಂದ ಐದಾರು ತಿಂಗಳಲ್ಲಿ ಸರಕಾರ ದಿವಾಳಿಯಾಗಿದೆ. ನಾಲ್ಕು ವರ್ಷಗಳಲ್ಲಿ ರಾಜ್ಯದ ಹಣಕಾಸು ಸ್ಥಿತಿ ಅಧೋಗತಿಯಾಗಲಿದೆ ಎಂದಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ