ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಪರೋಕ್ಷ ಪ್ರೋತ್ಸಾಹದಿಂದ ಮತಾಂಧ ಶಕ್ತಿಗಳು ಗಲಭೆ ಸೃಷ್ಟಿಸಿ ಜನ ಸಾಮಾನ್ಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಇದನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಲಭೆಕೋರರ ಮೇಲಿನ ಕೇಸು ವಾಪಾಸು ತೆಗೆದುಕೊಂಡು ಕಾಂಗ್ರೆಸ್ ಸರಕಾರವೇ ಮತಾಂಧರಿಗೆ ಹಿಂದೂಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ಜಿಲ್ಲೆಯ ಮಣಿಪಾಲ,ಕುಂದಾಪುರ ಚೂರಿ ಇರಿತ ಘಟನೆಗಳ ಹಿಂದೆ ಮತಾಂಧ ಶಕ್ತಿಗಳ ಹುನ್ನಾರ ಅಡಗಿದೆ. ಹುಬ್ಬಳ್ಳಿ ಧಾರವಾಡ ಉಗ್ರರ ತಂಗುದಾಣವಾಗಿ ಮಾರ್ಪಾಡಾಗಿದೆ. ಜಿಲ್ಲೆಯಲ್ಲಿ ಶಾಂತಿ ಕದಡಿ ಹಿಂದೂ ಸಮಾಜವನ್ನು ಬೆದರಿಸುವ ಪ್ರಯತ್ನ ನಡೆಸಿದರೆ ಕೈಕಟ್ಟಿ ಕೂರುವುದಿಲ್ಲ. ಶಿವಮೊಗ್ಗದಲ್ಲಿ ಎಸ್ಪಿಯವರೇ ಆಕ್ರಮಣಕ್ಕೆ ಹೆದರಿ ಓಡಿ ಹೋಗುತ್ತಾರೆಂದರೆ ಗಲಭೆಕೋರರಿಗೆ ಕಾನೂನಿನ ಭಯವೇ ಇಲ್ಲವಾಗಿದೆ. ಗೃಹ ಸಚಿವರು ಶಿವಮೊಗ್ಗದ ಘಟನೆಯನ್ನು ಚಿಕ್ಕ ಘಟನೆ ಎನ್ನುವ ಮೂಲಕ ಪೊಲೀಸ್ ಇಲಾಖೆಗೆ ಪ್ರಕರಣವನ್ನು ಮುಚ್ಚಿ ಹಾಕಲು ಪರೋಕ್ಷ ಆದೇಶ ನೀಡಿದ್ದು, ಸರ್ಕಾರ ಕೂಡಲೇ ಎಚ್ಚೆತ್ತು ಮತಾಂಧ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಜಾಗೃತ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ