ಉಡುಪಿ;- ಜಿಲ್ಲೆಯ ಕಾಪು ತಾಲೂಕು ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದಲ್ಲಿ ಸ್ನೇಹಿತರ ಜೊತೆಗೆ ನೀರು ತುಂಬಿದ ಗುಂಡಿಗೆ ಈಜಲು ತೆರಳಿದ್ದ ನಾಲ್ವರು ಮಕ್ಕಳ ಪೈಕಿ ಓರ್ವ ಮೃತಪಟ್ಟಿದ್ದು, ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ನಡೆದಿದೆ.
ವಿಶ್ವಾಸ್ ನಾಯಕ್ (11) ಮೃತ ದುರ್ದೈವಿ. ಈತ ಇನ್ನಂಜೆ ಎಸ್‌ಎಸ್ ಆಂಗ್ಲಮಾಧ್ಯಮ ಶಾಲೆಯ ಏಳನೇಯ ತರಗತಿ ವಿದ್ಯಾರ್ಥಿಯಾಗಿದ್ದು, ಗುರುವಾರ ಶಾಲೆಯಿಂದ ಬಂದವನು ಸ್ನೇಹಿತರ ಜೊತೆ ಕೆರೆಗೆ ಈಜಲು ತೆರಳಿದ್ದ. ಈಜುತ್ತಿದ್ದ ವಿಶ್ವಾಸ್ ಮುಳುಗಿ ಅಸ್ವಸ್ಥನಾಗಿದ್ದನ್ನು ಕಂಡು ಸ್ನೇಹಿತರು ಮಹಿಳೆಯೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಸ್ಥಳೀಯರು ಕೆರೆಯಿಂದ ವಿಶ್ವಾಸ್‌ನನ್ನು ಮೇಲಕ್ಕೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ವಿಶ್ವಾಸ್ ನಾಯಕ್ ಮೃತಪಟ್ಟಿದ್ದಾನೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ