Slider


ಶಿವಮೊಗ್ಗ ಗಲಭೆ; 24 ಎಫ್‌ಐಆರ್ ದಾಖಲು, 60 ಮಂದಿ ಅರೆಸ್ಟ್

 


ಶಿವಮೊಗ್ಗ: ಈದ್‌ ಮಿಲಾದ್‌ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆ, ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಇದುವರೆಗೆ 24 ಎಫ್‌ಐಆರ್ ಗಳನ್ನು ದಾಖಲಾಗಿದ್ದು, 60 ಮಂದಿಯನ್ನು ಬಂಧಿಸಲಾಗಿದೆ.

ಈ ಕುರಿತು ಎಸ್‌ಪಿ ಮಿಥುನ್ ಕುಮಾರ್‌ ಪ್ರತಿಕ್ರಿಯಿಸಿದ್ದು, ಬಂಧಿತ ಆರೋಪಿಗಳಲ್ಲಿ ಕೆಲವರನ್ನು ಶಿವಮೊಗ್ಗ, ಇನ್ನು ಕೆಲವರನ್ನು ಚಿತ್ರದುರ್ಗ ಜೈಲಿಗೆ ಹಾಕಲಾಗುವುದು. ಗಲಭೆಯಲ್ಲಿ ಒಂದು ಕಾರು, ಒಂದು ತ್ರಿಚಕ್ರ ವಾಹನ, ಎರಡು ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ. ಗಲಭೆಯಲ್ಲಿ 7 ಮನೆ ಗಾಜು ಪುಡಿಪುಡಿಯಾಗಿದೆ. ಸೋಮವಾರ ಬೆಳಗ್ಗೆಯಿಂದ ಇಲ್ಲಿಯವರೆಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. 144 ಸೆಕ್ಷನ್ ಇರುವ ಕಾರಣ ಅಹಿತಕರ ಘಟನೆ ನಡೆಯುತ್ತಿಲ್ಲ ಎಂದು ಹೇಳಿದರು.

ಭಾನುವಾರ ಬೆಳಗ್ಗೆ ಈದ್​ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ತಲ್ವಾರ್​ ಮಾದರಿ ಕಟೌಟ್ ವಿಚಾರಕ್ಕೆ ಗೊಂದಲ ಸೃಷ್ಟಿಯಾಗಿತ್ತು. ಕಟೌಟ್ ವಿಚಾರವಾಗಿ ಹಿಂದೂ-ಮುಸ್ಲಿಂ ಗದ್ದಲ ಎದ್ದಿತ್ತು. ರಾಗಿಗುಡ್ಡ ಮುಖ್ಯರಸ್ತೆಯಲ್ಲಿ ಕಟೌಟ್ ಹಾಕಲಾಗಿದ್ದು ಜನರು ಪ್ರತಿಭಟನೆ ಮಾಡಿದ್ದರು. ಈ ವೇಳೇ ಕಲ್ಲುತೂರಾಟವೂ ನಡೆದಿತ್ತು.






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo