Slider

600ರೂ.ಗೆ ಉಜ್ವಲ ಸಿಲಿಂಡರ್; ಕೇಂದ್ರ ಕ್ಯಾಬಿನೆಟ್ ನಿರ್ಧಾರ

ಕೇಂದ್ರ ಸರ್ಕಾರ ಬುಧವಾರದ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ದೇಶದ ಬಡವರಿಗೆ ಉಜ್ವಲ ಯೋಜನೆಯ ಅಡಿಯಲ್ಲಿ ನೀಡಲಾಗುವ ಗ್ಯಾಸ್‌ ಸಬ್ಸಿಡಿಯನ್ನು 100 ರೂಪಾಯಿ ಏರಿಕೆ ಮಾಡಿದೆ. ಅದರಂತೆ ಇಲ್ಲಿಯವರೆಗೂ 200 ರೂಪಾಯಿ ಸಬ್ಸಿಡಿ ಪಡೆಯುತ್ತಿದ್ದ ಇವರು, ಇನ್ನು 300 ರೂಪಾಯಿ ಸಬ್ಸಿಡಿ ಪಡೆದುಕೊಳ್ಳಲಿದ್ದಾರೆ.

ಇದರಿಂದಾಗಿ ಉಜ್ವಲ ಯೋಜನೆಯ ಫಲಾನುಭವಿಗಳು 600 ರೂಪಾಯಿಗೆ ಸಿಲಿಂಡರ್‌ ಪಡೆದುಕೊಳ್ಳಲಿದ್ದಾರೆ. ಇದರಲ್ಲಿ 300 ರೂಪಾಯಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ. ಈ ಕುರಿತಾಗಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿದರು. ತೆಲಂಗಾಣ ರಾಜ್ಯದಲ್ಲಿ ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯಿದೆ, 2009 ರ ತಿದ್ದುಪಡಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಪ್ರಸ್ತುತ ಉಜ್ವಲ ಯೋಜನೆಯ ಅಡಿಯಲ್ಲಿ 14.2 ಕೆಜಿಯ ಗ್ಯಾಸ್‌ ಸಿಲಿಂಡರ್‌ ಪಡೆಯುವ ಬಡ ಮಹಿಳೆಯರು ಅದಕ್ಕಾಗಿ 703 ರೂಪಾಯಿ ಪಾವತಿ ಮಾಡುತ್ತಿದ್ದಾರೆ. ಇದರಲ್ಲಿ 200 ರೂಪಾಯಿ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ಈಗ ಮತ್ತೆ 100 ರೂಪಾಯಿ ಕೇಂದ್ರ ಸಬ್ಸಿಡಿ ನೀಡಲಿರುವ ಕಾರಣ 603 ರೂಪಾಯಿಗೆ ಉಜ್ವಲ ಯೋಜನೆಯ ಸಿಲಿಂಡರ್‌ ಸಿಗಲಿದೆ. ಇನ್ನು ಮಾರುಕಟ್ಟೆಯಲ್ಲಿ ಗೃಹಬಳಕೆಯೆ ಸಿಲಿಂಡರ್ ಬೆಲೆ 903 ರೂಪಾಯಿಯೇ ಆಗಿದೆ.







0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo