Slider

ಮಣಿಪಾಲ: ಮನೆಯಲ್ಲಿ ಅನೈತಿಕ ಚಟುವಟಿಕೆ - ಪೊಲೀಸ್ ದಾಳಿ ಇಬ್ಬರ ಬಂಧನ

ಮಣಿಪಾಲ: ಹೆರ್ಗಾ ಗ್ರಾಮದ ಸರಳೇಬೆಟ್ಟುವಿನ ಮನೆಯೊಂದರಲ್ಲಿ ಯುವತಿಯರನ್ನು ಬಳಸಿಕೊಂಡು ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಮಣಿಪಾಲ ಇನ್ಸ್‌ಪೆಕ್ಟರ್ ದೇವ‌ರಾಜ್ ಟಿ.ವಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. 

ಅಕ್ರಮ ಹಣಗಳಿಸುವ ಉದ್ದೇಶದಿಂದ ಹುಡುಗಿಯರನ್ನು ಪುಸಲಾಯಿಸಿ ಕರೆ ತಂದು ಅವರಿಗೆ ಬಲವಂತಾಗಿ ಪುರುಷರನ್ನು ಒದಗಿಸಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಮಂಡ್ಯದ ಶಿವರಾಜ(38) ಮತ್ತು ಬಾಗಲಕೋಟೆಯ ನಿಂಗಪ್ಪ ಅಂಬಿಗೇರಾ (29) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ನವೀನ್ ಗೌಡ ಎಂಬಾತ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಎರಡು ಮೊಬೈಲ್ ಫೋನ್ ಹಾಗೂ 15 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo