ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸಂಪನ್ನಗೊಳ್ಳಲಿರುವ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವೈವಿಧ್ಯಮಯಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಜಾನಪದ-ಭಾವಗೀತೆಗಳ ರಸದೌತಣ, ಸಾಂಸ್ಕೃತಿಕ ನೃತ್ಯ ಕಲಾ ಬಳಗ ಕುಂಜಿಬೆಟ್ಟು ಅವರಿಂದ ಕರಗ ನೃತ್ಯ, ಯಕ್ಷ ನೃತ್ಯ, ಜಾನಪದ ನೃತ್ಯ ಮತ್ತು ವಿಶೇಷವಾದ ಪಟ ನೃತ್ಯ, ಕೊರವಂಜಿ ನೃತ್ಯ ಸ್ಥಳೀಯರಿಂದ ವಿವಿಧ ಮನೋರಂಜನೆ ನೆರವೇರಿತು.
ಸ್ವಾತಿ ಆಚಾರ್ಯರಿಗೆ ಸಮ್ಮಾನ
ಕಲಾ ಪ್ರಕಾರಗಳ ಸಂಸ್ಥೆಕಲಾನಿಧಿ ತಂಡದ ದಶಮಾನೋತ್ಸವ ಅಂಗವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಸೋಮವಾರ ನೀಡಿದಜಾನಪದ-ಭಾವಗೀತೆಗಳ ಸಂಗೀತ ಸೌರಭ ಕಾರ್ಯಕ್ರಮ ಸಂದರ್ಭ ಕ್ಷೇತ್ರದ ಸ್ವಾತಿ ಆಚಾರ್ಯ ಅವರನ್ನು 'ನಾಟ್ಯ ನಿಧಿ' ಬಿರುದು ನೀಡಿ ಸಮ್ಮಾನಿಸಲಾಯಿತು.
ಕಲಾನಿಧಿ ತಂಡದ ಮುಖ್ಯಸ ಉಳ್ಳೂರು ಭಾಗ್ಯಲಕ್ಷ್ಮೀ ಅವರು ಸಮ್ಮಾನಿಸಿ,ಯಾವುದೇ ತರಬೇತಿ ಪಡೆಯದೆ, ಸ್ವಯಂ ನೃತ್ಯಾಭ್ಯಾಸ ದಿಂದ ಮನೋಜ್ಞ ಭಾವಾಭಿನಯದ ಮೂಲಕ ಪ್ರೇಕ್ಷಕರ ಕಣ್ಮನ ಸೆಳೆಯುವಂತೆ ಸ್ವಾತಿ ನಾಟ್ಯ ಪ್ರದರ್ಶನ ನೀಡುತ್ತಿದ್ದಾರೆ ಎಂದರು.
ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ, ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಉಷಾರಮಾನಂದ, ಕ್ಷೇತ್ರದ ಉಸ್ತುವಾರಿಕುಸುಮಾ ನಾಗರಾಜ್, ನಾಗರಾಜ ಆಚಾರ್ಯ, ಪ್ರಣಮ್ಯಾ ಹಾಗೂ ಕಲಾನಿಧಿ ತಂಡದ ಸಹ ಕಲಾವಿದರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ