Slider

ಮಂಗಳೂರು: ಹುಲಿ ವೇಷಧಾರಿಯ ಮೈಮೇಲೆ ದೈವ ಆವಾಹನೆ

ಹುಲಿವೇಷ ದೈವ‌ಆವಾಹನೆ

 

ಮಂಗಳೂರು: ಹುಲಿವೇಷ ಕಲಾವಿದನ ಮೇಲೆ ದೈವ ಆವಾಹನೆಯಾಗಿರುವ ಘಟನೆ ಮಂಗಳೂರಿನ ಬೊಕ್ಕಪಟ್ಣದಲ್ಲಿ ನಡೆದಿದೆ‌. ಬೊಕ್ಕಪಟ್ಣ ಶಿವ ಫ್ರೆಂಡ್ಸ್‌ನ ಹುಲಿವೇಷದ ಊದುಪೂಜೆ ನಿನ್ನೆ ಕಾರ್ಯಕ್ರಮ ನಡೆದಿದೆ. ಹುಲಿವೇಷ ಹಾಕುವುದಕ್ಕಿಂತ ಮೊದಲು ದೇವರ ಸೇವೆಯೆಂಬಂತೆ ಈ ಆರಾಧನೆ ನಡೆಯುತ್ತಿದೆ.

ಹುಲಿವೇಷ ಬಣ್ಣ ಧಾರಣೆ ಮಾಡದೆ ಹುಲಿವೇಷದ ನರ್ತನ ಸೇವೆ ಇರುತ್ತದೆ. ಈ ವೇಳೆ ಹುಲಿವೇಷ ಕಲಾವಿದನ ಮೇಲೆ ದೈವ ಆವಾಹನೆಯಾಗಿದೆ. ನಟ ರಾಜ್ ಬಿ. ಶೆಟ್ಟಿಯವರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ನಾಲ್ಕೈದು ಮಂದಿ ಹಿಡಿದುಕೊಂಡಿದ್ದರೂ ಆವಾಹನೆಯಾಗಿದ್ದ ಯುವಕ ಕೊಸರಾಡುತ್ತಿರುವುದನ್ನು ನೋಡುವಾಗ ಮೈಜುಮ್ಮೆನಿಸುತ್ತದೆ. ಬಳಿಕ ಹಿರಿಯೊಬ್ಬರು ಸಾಂತ್ವನ ಮಾಡಿ ನೀರು ಚಿಮುಕಿಸಿದ ನಂತರ ಆತ ಸಹಜ ಸ್ಥಿತಿಗೆ ಬಂದಿದ್ದಾನೆ‌. ಕಳೆದ ಬಾರಿ ಉಡುಪಿಯಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು.








0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo