Slider

ಬ್ರಹ್ಮಾವರ: ನ.5ರಂದು ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಆಶ್ರಯದಲ್ಲಿ ನುಡಿ ಚಿತ್ತಾರ -2023 ಸಾಂಸ್ಕೃತಿಕ ಕಾರ್ಯಕ್ರಮ

 


ಬ್ರಹ್ಮಾವರ : ಬೈಕಾಡಿಯ ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಯು ಕನ್ನಡ ರಾಜ್ಯೋತ್ಸವದ ಸಂಭ್ರಮಾಚಾರಣೆ ಪ್ರಯುಕ್ತ ‘ನುಡಿ ಚಿತ್ತಾರ -2023’ ಮಕ್ಕಳಿಗಾಗಿ ಕಥೆ ಹೇಳುವ ಸ್ಪರ್ಧೆ ಮತ್ತು ಸಾರ್ವಜನಿಕರಿಗಾಗಿ ಛದ್ಮವೇಷ ಸ್ಪರ್ಧೆಯನ್ನು (ವಿಷಯ : ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿ) ಆಯೋಜಿಸುತ್ತಿದೆ. ಸ್ಪರ್ಧೆಗಳು ದಿನಾಂಕ 05-11-2023ರಂದು ಬ್ರಹ್ಮಾವರದ ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಕಥೆ ಹೇಳುವ ಸ್ಪರ್ಧೆಯ ನಿಯಮ ನಿಬಂಧನೆಗಳು :

> 8ರಿಂದ 14 ವರ್ಷದ ಒಳಗಿನ ಮಕ್ಕಆಗೆ ಮಾತ್ರ ಅವಕಾಶ. ವೈಯಕ್ತಿಕ ವಿಭಾಗ ಮಾತ್ರ.

> ಪ್ರವೇಶ ಉಚಿತ.

> ಕಡ್ಡಾಯವಾಗಿ ಕನ್ನಡದಲ್ಲೇ ಕಥೆ ಹೇಳತಕ್ಕದ್ದು.

> ಸಮಯಮಿತಿ ಗರಿಷ್ಠ 5 ನಿಮಿಷ

> ಕಥೆಯ ಆಯ್ಕೆ, ಸ್ಪಷ್ಟತೆ, ಪ್ರಸ್ತುತಿ ಹಾಗೂ ಒಟ್ಟು ಪರಿಣಾಮ ಇವು ಮುಖ್ಯವಾಗಿ ಪರಿಗಣಿಸಲ್ಪಡುವ ಅಂಶಗಳು.

> ನೋಂದಾವಣೆ ಕಡ್ಡಾಯ. ಸೀಮಿತ ಅವಕಾಶವಿದ್ದು ಮೊದಲು ನೋಂದಾಯಿಸಿದವರಿಗೆ ಆದ್ಯತೆ.

> ತೀರ್ಪುಗಾರರ ತೀರ್ಮಾನವೇ ಅಂತಿಮ.

ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಪ್ರಥಮ ರೂಪಾಯಿ 2,000/-, ದ್ವಿತೀಯ ರೂಪಾಯಿ 1,000/- ಹಾಗೂ ತೃತೀಯ ರೂಪಾಯಿ 500/- ನೀಡಲಾಗುವುದು.

ಛದ್ಮವೇಷ ಸ್ಪರ್ಧೆಯ ನಿಯಮ ನಿಬಂಧನೆಗಳು :

> 14 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಮುಕ್ತ ಅವಕಾಶ ವೈಯಕ್ತಿಕ ವಿಭಾಗ ಮಾತ್ರ.

> ನೋಂದಾವಣೆ ಕಡ್ಡಾಯ.

> ಪ್ರವೇಶ ಶುಲ್ಕ ರೂ 100/- ಮಾತ್ರ.

> ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿ ವಸ್ತು ವಿಷಯಕ್ಕೆ ಸಂಬಂಧಿಸಿದಂತೆಯೇ ನಿಮ್ಮ ಪ್ರಸ್ತುತಿ ಇರತಕ್ಕದ್ದು.

> ಸಮಯಮಿತಿ – ವೇದಿಕೆ ತಯಾರಿಗೆ ಗರಿಷ್ಠ 2 ನಿಮಿಷ + ಪ್ರಸ್ತುತಿಗೆ ಗರಿಷ್ಠ 2 ನಿಮಿಷ (2+2).

ಮಾತಿಗೆ ಅವಕಾಶ ಇಲ್ಲ, ಹಿನ್ನೆಲೆ ಸಂಗೀತ ಬಳಸಬಹುದು.

> ಅಶ್ಲೀಲ, ಅಸಭ್ಯತೆ ಮತ್ತು ವ್ಯಕ್ತಿಗತ ನಿಂದನೆಗೆ ಅವಕಾಶ ಇಲ್ಲ.

> ಹಾವ-ಭಾವ, ವೇಷಭೂಷಣ ಹಾಗೂ ಒಟ್ಟು ಪರಿಣಾಮ ಇವು ಮುಖ್ಯವಾಗಿ ಪರಿಗಣಿಸಲ್ಪಡುವ ಅಂಶಗಳು.

> ತೀರ್ಪುಗಾರರ ತೀರ್ಮಾನವೇ ಅಂತಿಮ.


ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಪ್ರಥಮ ರೂಪಾಯಿ 5,000/-, ದ್ವಿತೀಯ ರೂಪಾಯಿ 3,000/- ಹಾಗೂ ತೃತೀಯ ರೂಪಾಯಿ 1,000/- ನೀಡಲಾಗುವುದು.

ಎರಡೂ ಸ್ಪರ್ಧೆಗಳ ನೋಂದಣಿಗೆ 02-11-2023 ಕೊನೆಯ ದಿನಾಂಕ, ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9972117300, 9880470301, 9481253585 ಸಂಖ್ಯೆಗಳನ್ನು ಸಂಪರ್ಕಿಸಬಹುದು.






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo