ಬೆಂಗಳೂರು : ಪುನೀತ್ ಕೆರೆಹಳ್ಳಿಗೆ ಗೂಂಡಾ ಕಾಯ್ದೆಯಿಂದ ರಿಲೀಫ್ ಸಿಕ್ಕಿದ್ದು, ಪುನೀತ್ ಕೆರೆಹಳ್ಳಿ ವಿರುದ್ದದ ಗೂಂಡಾ ಕಾಯ್ದೆಯನ್ನು ಹೈಕೋರ್ಟ್ ರದ್ದು ಮಾಡಿದೆ. ಕಳೆದ ಎರಡು ತಿಂಗಳ ಹಿಂದೆ ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಬಂಧನವಾಗಿತ್ತು. ಪುನೀತ್ ಕೆರೆಹಳ್ಳಿ ವಿರುದ್ದ ದಾಖಲಾಗಿದ್ದ ಪ್ರಕರಣಗಳನ್ನು ಉಲ್ಲೇಖಿಸಿ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. ಈ ಬಂಧನ ಪ್ರಶ್ನಿಸಿ ಪುನೀತ್ ಕೆರೆಹಳ್ಳಿ ವಕೀಲರು ಹೇಬಿಯಸ್ ಕಾರ್ಪಸ್ ಹಾಕಿದ್ದರು. ಪುನೀತ್ ಕೆರೆಹಳ್ಳಿ ಸಮಾಜಸೇವೆ ಮಾಡುತ್ತಿದ್ದಾರೆ. ಪುನೀತ್ ಕೆರೆಹಳ್ಳಿ ವಿರುದ್ದ ಸಣ್ಣಪುಟ್ಟ ಪ್ರಕರಣವಷ್ಟೇ ದಾಖಲಾಗಿದೆ.
ಸಾತನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 302 ಕೇಸ್ ಇನ್ನು ಚಾರ್ಜ್ ಶೀಟ್ ಆಗಿಲ್ಲ. ಉದ್ದೇಶಪೂರ್ವಕವಾಗಿ ಹಾಗೂ ದುರುದ್ದೇಶದಿಂದ ಸಿಸಿಬಿ ಅಧಿಕಾರಿಗಳು ಗೂಂಡಾಕಾಯ್ದೆ ಜಾರಿ ಮಾಡಿ ಬಂಧಿಸಿದ್ದಾರೆ. ಈ ಹಿನ್ನೆಲೆ ಪುನೀತ್ ಕೆರೆಹಳ್ಳಿ ವಿರುದ್ದ ದಾಖಲಾಗಿರುವ ಗೂಂಡಾಕಾಯ್ದೆ ವಜಾ ಮಾಡುವಂತೆ ವಾದ ಮಂಡನೆ ಮಾಡಿದ್ದು, ಪುನೀತ್ ಕೆರೆಹಳ್ಳಿ ಪರ ವಕೀಲ ಶ್ಯಾಮಸುಂದರ್ ವಾದ ಮಾಡಿದ್ದಾರೆ.ಬಂಧಿಯನ್ನು ಬಂದನದಲ್ಲಿ ಇಡಲು ಸಾಕಷ್ಟು ಕಾರಣಗಳಿಲ್ಲ ಎಂದು ತಿರ್ಮಾನ ಮಾಡಿ ಗೂಂಡಾ ಕಾಯ್ದೆ ವಜಾ ಮಾಡಲಾಗಿದೆ. ವಾದ ಪ್ರತಿವಾದ ಆಲಿಸಿ ಹೈಕೋರ್ಟ್ ಗೂಂಡಾ ಕಾಯ್ದೆ ವಜಾ ಮಾಡಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ