ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢದ ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಅವರನ್ನು ಪಂಜಾಬ್ ಪೊಲೀಸರು ಇಂದು ಬೆಳ್ಳಗ್ಗೆ ಬಂಧಿಸಿದ್ದಾರೆ.
ಜಲಾಲಾಬಾದ್ ಪೊಲೀಸರು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿಯಲ್ಲಿ ದಾಖಲಾಗಿರುವ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಖ್ಪಾಲ್ ಸಿಂಗ್ ಖೈರಾ ಅವರ ಸೆಕ್ಟರ್ 5 ರ ನಿವಾಸದ ಮೇಲೆ ಗುರುವಾರ ಮುಂಜಾನೆ ದಾಳಿ ನಡೆಸಿ ಬಂಧಿಸಿದ್ದಾರೆ.
ಇನ್ನು ಬಂಧನಕ್ಕೆ ಪೊಲೀಸರು ಬರುತ್ತಿದ್ದಂತೆ ಖೈರಾ ಫೇಸ್ ಬುಕ್ ಲೈವ್ ಮಾಡಿದ್ದು ಅದರಲ್ಲಿ ಪೊಲೀಸರೊಂದಿಗೆ ವಾದ ಮಾಡುವುದನ್ನು ಕಾಣಬಹುದು.
ವಿಡಿಯೋದಲ್ಲಿ ಖೈರಾ ಪೊಲೀಸರಲ್ಲಿ ಬಂಧಿಸಲು ಕಾರಣವನ್ನು ಕೇಳುವ ವಿಚಾರವೂ ಬಹಿರಂಗಗೊಂಡಿದ್ದು ಜೊತೆಗೆ ತನ್ನನ್ನು ಬಂಧಿಸಲು ಅರೆಸ್ಟ್ ವಾರಂಟ್ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೆಲ್ಲದರ ನಡುವೆ ಪೊಲೀಸರು ಸುಖ್ಪಾಲ್ ಸಿಂಗ್ ಖೈರಾ ಅವರನ್ನು ಬಂಧಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ