Slider

ನಾಳೆಯ ಕರ್ನಾಟಕ ಬಂದ್‌ಗೆ ದ.ಕ ಜಿಲ್ಲೆಯಲ್ಲಿ ಸ್ಪಂದನೆ ಇರಲ್ಲ; ಎಂದಿನಂತೆ ಸಂಚರಿಸಲಿವೆ ಖಾಸಗಿ ಬಸ್ಸುಗಳು


 ಮಂಗಳೂರು: ಕಾವೇರಿ ನದಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕರಾವಳಿ ಭಾಗದಲ್ಲಿ  ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳೇ ಹೆಚ್ಚಿದ್ದು ಬಸ್‌ ಮಾಲಕರ ಸಂಘ ಬಂದ್ ಕರೆಗೆ ಬೆಂಬಲ ನೀಡಿಲ್ಲ. 

 ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ, ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಮತ್ತೊಂದೆಡೆ ಕಾಲೇಜು ವಿದ್ಯಾರ್ಥಿಗಳಿಗೆ ನೀಟ್ ಇನ್ನಿತರ ಪರೀಕ್ಷೆ ಆಗುತ್ತಾ ಇದೆ. ಹಿಂದೆ ಕನ್ನಡ ಪರ ಸಂಘಟನೆಗಳು ನಮ್ಮ ಬಂದ್ ಕರೆಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಕಾವೇರಿ ಬಂದ್ ಕರೆಗೆ ನಾವು ನೈತಿಕ ಬೆಂಬಲ ನೀಡುತ್ತೇವೆ. ಆದರೆ ಬಂದ್ ಅಥವಾ ಪ್ರತಿಭಟನೆಗಿಳಿಯೋದಿಲ್ಲ. ಎಂದಿನಂತೆ ಖಾಸಗಿ ಬಸ್ ಗಳು ಓಡಾಟ ನಡೆಸಲಿವೆ ಎಂದು ತಿಳಿಸಿದ್ದಾರೆ.








0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo