ಕಾವೇರಿ ಕಿಚ್ಚು ಕಾವೇರಿದ್ದು, ಕನ್ನಡ ಪರ ಹೋರಾಟಗಾರರು ಸೆ.29 ರಂದು ಇಡೀ ಕರ್ನಾಟಕ ಬಂದ್ ಮಾಡಲು ಕರೆ ನೀಡಿದ್ದಾರೆ. ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್ ಇರಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಯಾರನ್ನು ಬಿಡದೆ, ಎಲ್ಲರನ್ನೂ ಕಟ್ಟಿಕೊಂಡು ಹೋರಾಟ ಮಾಡಬೇಕು. ನಾಳೆ ಬೆಳಗ್ಗೆ ಕನ್ನಡ ಮುಖಂಡರು ಸೇರಿ ಸಭೆ ಮಾಡ್ತಿವಿ. ಇದು ಕನ್ನಡ ಒಕ್ಕೂಟ ಮಾಡುತ್ತಿರುವ ಬಂದ್. ಹೀಗಾಗಿ ಅಖಂಡ ಕರ್ನಾಟ ಬಂದ್ ಇರಲಿದೆ. ಸಭೆಯಲ್ಲಿ ಈ ಬಗ್ಗೆ ಸಂಪೂರ್ಣ ತೀರ್ಮಾನಕ್ಕೆ ಬರುತ್ತೇವೆ. ಈ ಬಂದ್‌ಗೆ ಕನ್ನಡ ಒಕ್ಕೂಟದ ಆಶ್ರಯದಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಸಾಹಿತಿಗಳು, ವ್ಯಾಪಾರಿಗಳು ಎಲ್ಲರೂ ಇದಕ್ಕೆ ಬೆಂಬಲ ಕೊಡಬೇಕು ಎಂದು ಹೇಳಿದರು.
ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್‌ಗೆ ಈಗಾಗಲೇ ಕೆಎಸ್‌ಆರ್‌ಟಿಸಿ ನೌಕರರ ಸಂಘ ಹಾಗೂ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಬೆಂಬಲ ನೀಡಿದೆ.
ಬೆಂಗಳೂರು ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತೆ. ಸಾರಿಗೆ ಬಸ್ ರೋಡ್ ಗೆ ಇಳಿಯುವುದಿಲ್ಲ ಎಂದು ಕೆಎಸ್‌ಆರ್ಟಿಸಿ ಸ್ಟಾಫ್ ಆಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ.
ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ