Slider

ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ; ಅ.3ರಂದು ಉಡುಪಿ ಜಿಲ್ಲಾ ಬಂದ್

 


ಉಡುಪಿ: ಪರವಾನಿಗೆ ಸಮಸ್ಯೆ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಜಿಲ್ಲಾ ಕಟ್ಟಡ ಸಾಮಗ್ರಿ ಲಾರಿ ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟವು ಅ.3ರಂದು ಉಡುಪಿ ಜಿಲ್ಲಾ ಬಂದ್‌ ನಡೆಸಲು ನಿರ್ಧರಿಸಿವೆ.

ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ, ಜಿಲ್ಲಾ ಎಸ್‌ಪಿ ಡಾ| ಅರುಣ್‌ ಕೆ. ಅವರು ಐವರು ಶಾಸಕರ ಸಮ್ಮುಖದಲ್ಲಿ ಲಾರಿ, ಟೆಂಪೋ ಮಾಲಕರ ಸಭೆ ನಡೆಸಿದ್ದರೂ ಫ‌ಲಪ್ರದವಾಗಿರಲಿಲ್ಲ.

ಹೀಗಾಗಿ ಒಕ್ಕೂ ಟದ 12 ವಲಯದ ಅಧ್ಯಕ್ಷರು ಸೇರಿದಂತೆ ಪ್ರಮುಖರು ಶುಕ್ರವಾರ ಸಭೆ ನಡೆಸಿ, ಅ.3ರಂದು ಬಂದ್‌ಗೆ ಕರೆ ನೀಡಿದ್ದಾರೆ.

ಬಂದ್‌ ಸಂಬಂಧ ಶನಿವಾರ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಒಕ್ಕೂಟದ ಪ್ರತಿನಿಧಿ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo