Slider

ಉಡುಪಿ: ಸರ್ಕಾರಿ ಕಚೇರಿಯ ಕಡತಗಳ ಕಳ್ಳತನ ; ದೂರು ದಾಖಲು


ಉಡುಪಿ ತಾಲೂಕು ಕಛೇರಿಯ ಅಧೀನಕ್ಕೆ ಒಳಪಟ್ಟಿದ್ದ ಬನ್ನಂಜೆಯಲ್ಲಿರುವ ಗಾಂಧಿ ಭವನದಲ್ಲಿ ಶೇಖರಿಸಿ ಇಟ್ಟಿದ್ದ ಸರ್ಕಾರಿ ದಾಖಲೆಗಳು ಕಳ್ಳರ ಪಾಲಾಗಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಧಿ ಭವನದಲ್ಲಿ ತಾಲೂಕು ಕಚೇರಿಯ ದಾಖಲೆಗಳನ್ನು ಹಿಂದಿನಿಂದಲೂ ಅಧಿಕಾರಿಗಳು ಶೇಖರಿಸಿಡುತ್ತಿದ್ದರು ಎನ್ನಲಾಗಿದೆ, ಆ.15ರಿಂದ ಸೆ.26ರ ನಡುವೆ ಗಾಂಧಿ ಭವನದ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದ್ದು ಈ ಬಗ್ಗೆ ಉಡುಪಿ ತಾಲೂಕು ಕಛೇರಿಯ ಪ್ರಥಮ ದರ್ಜೆ ಸಹಾಯಕ ನಟರಾಜ್ ನಗರ ಠಾಣೆಗೆ ದೂರು ನೀಡಿದ್ದಾರೆ.






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo