ಉಡುಪಿ : ಲೋಕಸಭಾ ಚುನಾವಣೆ ಎದುರಿಸಲು, ಬಿಜೆಪಿ ಜೆಡಿಎಸ್ ಮೈತ್ರಿಯಾದರೆ ನಾನು ಸ್ವಾಗತಿಸುತ್ತೇನೆ ಎಂದು ಮಾಜಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂದಿಸಿದಂತೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, 150 ಕೋಟಿ ಜನಕ್ಕೆ ಮೋದಿ ಬೇಕು. ಆದರಿಂದ 2024ರ ಚುನಾವಣೆ ಬಿಜೆಪಿಗೆ ಬಹಳ ಮಹತ್ವದಾಗಿದೆ. ಮೋದಿಯವರು ಮತ್ತೆ ದೇಶದ ಪ್ರಧಾನಿಯಾಗುವುದು ಅವಶ್ಯವಿದೆ. ದೇಶವನ್ನು ಮುನ್ನಡೆಸುವ ಸಮರ್ಥ ನಾಯಕತ್ವ ಮೋದಿಯವರಿಗೆ ಮಾತ್ರ ಇದ್ದು, ದೇಶದ ರಕ್ಷಣೆ, ಆರ್ಥಿಕತೆ ಹಾಗೂ ಜನಸಾಮಾನ್ಯರ ಅಭಿವೃದ್ಧಿಗಾಗಿ ಮೋದಿಯವರು ಬೇಕು. ಆದರಿಂದ ಕಾಂಗ್ರೆಸ್ ಪಕ್ಷ ಎದುರಿಸಲು ಹಳೆ ಕಹಿ ಮರೆತು ಜೆಡಿಎಸ್ ನೊಂದಿಗೆ ಮೈತ್ರಿಯನ್ನು ನಾನು ಸ್ವಾಗತಿಸುತ್ತೇನೆ" ಎಂದರು.
ಹಳೆಯ ಹತ್ತಾರು ಸಂಗತಿಗಳು ನಮ್ಮ ಎರಡು ಪಕ್ಷಗಳ ನಡುವೆ ಇರಬಹುದು, ಆದರೆ 2024ರ ಗುರಿ ಮೋದಿಯನ್ನು ದೇಶದ ಪ್ರಧಾನಿ ಮಾಡೋದು, ಪೂರ್ಣಬಹುಮತದ ಬಿಜೆಪಿ ಸರ್ಕಾರ ನಮ್ಮ ಗುರಿ. ಕೇಂದ್ರದಲ್ಲಿ ಬಹುಮತ ಸಾಧಿಸುವುದರಿಂದ ಕರ್ನಾಟಕದಲ್ಲಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿದೆ. ಜೆಡಿಎಸ್-ಬಿಜೆಪಿಯ ನಡುವೆ ಹಳೆಯ ಹತ್ತಾರು ವಿಷಯಗಳಿವೆ, ಆದರೆ ಮುಂದಿನ 2024ರ ಗುರಿ ದೊಡ್ಡದು ಇರೋದ್ರಿಂದ ಹಳೆಯ ವಿಚಾರಗಳನ್ನು ಮರೆತು 24ರ ಗುರಿಯನ್ನು ನೋಡಬೇಕಾಗಿದೆ ಎಂದು ಹೇಳಿದರು.
ವಿಪಕ್ಷ ನಾಯಕತ್ವದ ಬಗ್ಗೆ ಮಾತನಾಡಿದ ಅವರು, ಬಿಜೆಪಿ 66 ಶಾಸಕರು ಇರುವಾಗ ಬಿಜೆಪಿ ಶಾಸಕರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಿ ಎಂದು ನಾನು ಹೇಳಿದ್ದೆ, ಆ ನಿಲುವಿಗೆ ನಾನು ಇಂದಿಗೂ ಬದ್ಧವಾಗಿದ್ದೇನೆ. ನಮ್ಮ 66 ಬಿಟ್ಟು ಬೇರೆಯವರನ್ನ ವಿಪಕ್ಷ ನಾಯಕ ಮಾಡಿದ್ರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ ಎಂದಿದ್ದೆ, ಆದರೆ ಇದರ ಬಗ್ಗೆ ನಮ್ಮ ನಾಯಕರು ಮನವರಿಕೆ ಮಾಡಿದಂತೆ ನಡೆಯುತ್ತೇವೆ ಎಂದಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ