ತಿರುವನಂತಪುರಂ: ಪತಿ ಬೇರೊಬ್ಬ ಹುಡುಗಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾನೆ ಎಂದು ಶಂಕಿಸಿ ಯುವತಿಯೊಬ್ಬಳು ಜೀವ ತೆತ್ತಿದ್ದಾಳೆ. ಕೇರಳದ ರಾಜಧಾನಿ ತಿರುವನಂತಪುರಂನ ಅರುವಿಕ್ಕರದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ.
ರೇಷ್ಮಾ (23) ಮೃತ ಮಹಿಳೆ. ಈ ವರ್ಷ ಜೂನ್ 12 ರಂದು ಅಕ್ಷಯ್ ಮತ್ತು ರೇಷ್ಮಾ ವಿವಾಹವಾಗಿದ್ದರು. ಆದರೆ ಪತಿಯ ಮೇಲೆ ಸಂದೇಹ ಪಟ್ಟು ಪ್ರಾಣ ಬಿಟ್ಟಿದ್ದಾಳೆ.
ಪತಿಗೆ ಆರೋಗ್ಯ ಸರಿಯಿಲ್ಲ, ಬೇರೆ ಹುಡುಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ರೇಷ್ಮಾ ಶಂಕಿಸಿದ್ದಾಳೆ. ತನ್ನ ಪತಿ ಅಕ್ಷಯ್ ಒಬ್ಬ ಹುಡುಗಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾನೆ ಎಂದು ಅವಳು ಭಾವಿಸಿದಳು. ಇದರಿಂದ ರೇಷ್ಮಾ ಖಿನ್ನತೆಗೆ ಒಳಗಾಗಿದ್ದರು. ಇಂದು ಬೆಳಗಿನ ಜಾವ 3 ಗಂಟೆಗೆ ತನ್ನ ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಕ್ಷಯ್ ಮನೆಯಲ್ಲಿ ಇರಲಿಲ್ಲ. ಬೆಳಗ್ಗೆ 7 ಗಂಟೆ ಸುಮಾರಿಗೆ ರೇಷ್ಮಾಳ ಮೃತದೇಹ ನೋಡಿ ಅಕ್ಷಯ್ ಕುಟುಂಬಸ್ಥರು ಬೆಚ್ಚಿಬಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ರೇಷ್ಮಾ ಶವವನ್ನು ಆಸ್ಪತ್ರೆಗೆ ಕೊಂಡೊಯ್ದರು. ರೇಷ್ಮಾ ಸಾವಿನ ತನಿಖೆ ನಡೆಯುತ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ