ಕುಂದಾಪುರ: ಕತಾರ್‌ನಲ್ಲಿ ವರ್ಷಾಂತ್ಯ ನಡೆಯಲಿರುವ ಅಂತಾ ರಾಷ್ಟ್ರೀಯ ಕಿವುಡರ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿ ಸಲಾಗಿದ್ದು, ಕುಂದಾಪುರ ಮೂಲದ ಪೃಥ್ವಿರಾಜ್ ಶೆಟ್ಟಿ ಹುಂಚನಿ ಸ್ಥಾನ ಪಡೆದಿದ್ದಾರೆ. ಇವರು ಈ ತಂಡದ ಲ್ಲಿರುವ ಕರ್ನಾಟಕದ ಏಕೈಕ ಆಟಗಾರ.
32 ವರ್ಷದ ಪೃಥ್ವಿರಾಜ್ ಭಾರತದ ಕಿವುಡರ ಕ್ರಿಕೆಟ್ ತಂಡದ ಪ್ರಧಾನ ವೇಗಿ ಹಾಗೂ ಕೆಳ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ. ಇತ್ತೀಚೆಗೆ ನಡೆದ ತ್ರಿಕೋನ ಏಕದಿನ ಸರಣಿ, ಅದಕ್ಕೂ ಮೊದಲು ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಡಿ. 1ರಿಂದ ಡಿ. 12ರ ವರೆಗೆ ಕತಾರ್‌ನ ದೋಹಾದಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ವೀರೇಂದ್ರ ಸಿಂಗ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಆಲ್‌ರೌಂಡರ್ ಸಾಯ್ ಆಕಾಶ್ ಉಪನಾಯಕನಾಗಿದ್ದಾರೆ.
ಪೃಥ್ವಿರಾಜ್ ಶೆಟ್ಟಿ ಅವರು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಹುಂಚನಿಯ ದಿ| ಸುಭಾಶ್ಚಂದ್ರ ಶೆಟ್ಟಿ ಹಾಗೂ ಶೀಲಾವತಿ ದಂಪತಿಯ ಪುತ್ರ. ಅಂಪಾರು ಮೂಡುಬಗೆಯ ವಿಶೇಷ ಮಕ್ಕಳ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಕುಂದಾ ಪುರದ ಟಾರ್ಪ ಡೋಸ್ ತಂಡದ ಆಟಗಾರನಾಗಿ, ಚಕ್ರವರ್ತಿ ತಂಡದ ಅರೆ ಕಾಲಿಕ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಮೂಗರ ಕ್ರಿಕೆಟ್ ತಂಡದ ಆಟಗಾರನಾಗಿ, ಕರ್ನಾಟಕ ತಂಡದ ನಾಯಕನಾಗಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ