ಶಿರ್ವ: ನಗರದ ಮುಖ್ಯ ರಸ್ತೆಯ ಶಿರ್ವ ಪದವು ಬಸ್ಸು ನಿಲ್ದಾಣದ ಬಳಿ ಬಸ್ಸಿನಿಂದ ಬಿದ್ದ ಶಾಲಾ ಬಾಲಕನ ಎಡ ಕೈ ಬಸ್ಸಿನ ಹಿಂದಿನ ಚಕ್ರದ ಅಡಿಗೆ ಬಿದ್ದು ಜಖಂಗೊಂಡ ಘಟನೆ ನಡೆದಿದೆ.
ಮೊಹಮ್ಮದ್ ಅನ್ವರ್ ಬಸ್ ನಿಂದ ಬಿದ್ದ ಶಾಲಾ ವಿದ್ಯಾರ್ಥಿ. ಬೆಳ್ಮಣ್ ಕಡೆಯಿಂದ ಶಿರ್ವ ಪೇಟೆ ಕಡೆಗೆ ಬರುತ್ತಿದ್ದ ಬಸ್ಸು ಪದವು ಬಸ್‌ನಿಲ್ದಾಣದ ಬಳಿ ನಿಂತಿದ್ದು, ಮಕ್ಕಳು ಬಸ್ಸು ಹತ್ತುತ್ತಿದ್ದಂತೆ ಚಾಲಕ ನಿರ್ವಾಹಕನ ಸೂಚನೆ ಪಾಲಿಸದೆ ನಿರ್ಲಕ್ಷದಿಂದ ಬಸ್ ನ್ನು ಚಲಾಯಿಸಿದ ಪರಿಣಾಮ ಎದುರು ಬಾಗಿಲಿನಲ್ಲಿ ಬಸ್ಸು ಹತ್ತುತ್ತಿದ್ದ ಬಾಲಕ ಮೊಹಮ್ಮದ್ ಅನ್ವರ್ ಬಸ್ಸಿನಿಂದ ಕೆಳಗೆ ಬಿದ್ದಿದ್ದು, ಆತನ ಎಡಕೈ ಬಸ್ಸಿನ ಹಿಂದಿನ ಚಕ್ರದಡಿಗೆ ಬಿದ್ದು ಜಖಂಗೊಂಡಿದೆ.
ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ