ಉಡುಪಿ: ಹೆಜಮಾಡಿ ಟೋಲ್ ಗೇಟ್ ನಲ್ಲಿ ಬೆಂಗಳೂರಿನಿಂದ ಬಂದಿದ್ದ ಯುವಕರ ತಂಡ ಮತ್ತು ಟೋಲ್ ಗೇಟ್ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ.
ಫಾಸ್ಟ್ಯಾಗ್ ಇಲ್ಲದ ಕಾರಿನಲ್ಲಿ ಬಂದಿದ್ದ ಬೆಂಗಳೂರಿನ ಯುವಕರು ಹೆಜಮಾಡಿ ಟೋಲ್ ನಲ್ಲಿ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ತಾವೇ ಗೇಟ್ ತೆಗೆದು ಕಾರು ಚಲಾಯಿಸಿದ್ದರು ಎನ್ನಲಾಗಿದೆ.
ಈ ವೇಳೆ ಟೋಲ್ ಸಿಬ್ಬಂದಿ ಯುವಕರ ಜೊತೆ ದುರಹಂಕಾರದಿಂದ ವರ್ತಿಸಿದ್ದರು. ಟೋಲ್ ಗೇಟ್ ಸಿಬ್ಬಂದಿಗಳ ವರ್ತನೆಯಿಂದಾಗಿ ಯುವಕರ ತಂಡ ಆಕ್ರೋಶಗೊಂಡಾಗ ಗಲಾಟೆ ನಡೆದಿದೆ.ಮೊದಲು ಟೋಲ್ ಸಿಬ್ಬಂದಿ ಮತ್ತು ಯುವಕರ ನಡುವೆ ವಾಗ್ವಾದ ನಡೆದಿದ್ದು ನಂತರ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ