Slider


ಧರ್ಮಸ್ಥಳ: ಯಾತ್ರಾರ್ಥಿಗಳ ಲಕ್ಷಾಂತರ ಮೌಲ್ಯದ ನಗ ನಗದು ಕಳವು

ಧರ್ಮಸ್ಥಳ dharmasthalanews dharmasthalatemple theftnews udupinews Udupi Mangalore


 ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದ ಗದಗ ಮೂಲದ ಯಾತ್ರಾರ್ಥಿಗಳ ಕಾರಿನ ಗಾಜು ಒಡೆದು ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು ಮಾಡಿರುವ ಘಟನೆ ಆ.26ರಂದು ಧರ್ಮಸ್ಥಳದಲ್ಲಿ ನಡೆದಿದೆ.

ಗದಗ ಮಾಗಡಿ ಗ್ರಾಮದ ನಿವಾಸಿ ಬಸವರಾಜ ಗುಡಸಲಮನಿ (38) ಎಂಬವರು ಶನಿವಾರ ಬೆಳಗ್ಗೆ ಧರ್ಮಸ್ಥಳಕ್ಕೆ ತಮ್ಮ ಕಾರಿನಲ್ಲಿ ಬಂದಿದ್ದರು. ಕಾರನ್ನು ಧರ್ಮಸ್ಥಳ ಅಣ್ಣಪ್ಪ ಬೆಟ್ಟದ ಸಮೀಪ ಕಾರು ನಿಲ್ಲಿಸಿ ಲಾಕ್ ಮಾಡಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ.

ಕಾರಿನಲ್ಲಿ ವ್ಯಾನಿಟಿ ಬ್ಯಾಗ್ ನಲ್ಲಿಟ್ಟಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರ ಅಂದಾಜು ಮೌಲ್ಯ 1,96,000 ರೂ. ಮತ್ತು 4 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಕಳವಾಗಿದೆ.ಎಂದು ದೂರಿನಲ್ಲಿ ದೂರುದಾರರು ಉಲ್ಲೇಖಿಸಿದ್ದಾರೆ.

ಧರ್ಮಸ್ಥಳ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo