Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಬನ್ನಂಜೆಯಲ್ಲಿ ಜಯಲಕ್ಷ್ಮೀ ಸಿಲ್ಕ್ಸ್ ನೂತನ ಮಳಿಗೆ ಲೋಕಾರ್ಪಣೆ

Udupi


ಉಡುಪಿ: ಕಳೆದ 54 ವರ್ಷಗಳಿಂದ ಲಕ್ಷಾಂತರ ಗ್ರಾಹಕರ ಅಚ್ಚುಮೆಚ್ಚಿನ ಜವುಳಿ ಮಳಿಗೆಯಾಗಿರುವ ಉದ್ಯಾ ವರದ ಜಯಲಕ್ಷ್ಮೀ ಸಿಲ್ಕ್ಸ್ ಉಡುಪಿ ಬನ್ನಂಜೆಯಲ್ಲಿ  ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ಶೋರೂಂನ್ನು ಕರ್ಣಾಟಕ ಬ್ಯಾಂಕಿನ ನಿವೃತ್ತ ಎಂಡಿ ಮತ್ತು ಸಿಇಒ ಡಾ. ಮಹಾಬಲೇಶ್ವರ ಎಂ.ಎಸ್. ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವರ್ಣಮಯ ಇತಿಹಾಸವುಳ್ಳ ಉಡುಪಿಯಲ್ಲಿ ನಾನಾ ಶೈಲಿಯ ವಸ್ತುಗಳನ್ನು ಹೊಂದಿರುವ ವರ್ಣಮಯ ಜಯಲಕ್ಷಿ ಮಳಿಗೆ ಸ್ಥಾಪನೆಯಾಗಿರುವುದು ಮತ್ತಷ್ಟು ಮೆರುಗು ನೀಡಲಿದೆ. ಅತ್ಯಂತ ವಿಶಾಲ ವಾಗಿರುವ ಈ ಜವುಳಿ ಮಳಿಗೆಯಲ್ಲಿ ಜಯ ಮತ್ತು ಲಕ್ಷ್ಮೀ ಶಾಶ್ವತವಾಗಿ ನೆಲೆಸುವಂತಾಗಲಿ ಎಂದು ಶುಭ ಹಾರೈಸಿದರು.

ಪ್ರಥಮ ಅಂತಸ್ತಿನ ಸೀರೆ ವಿಭಾಗವನ್ನು ಉದ್ಘಾಟಿಸಿದ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌, ಸಿಬಂದಿಯ ನಗುಮೊಗದ ಸೇವೆಯೊಂದಿಗೆ ಉತ್ತಮ ಗುಣಮಟ್ಟದ ಬಟ್ಟೆಬರೆಗಳನ್ನು ಗ್ರಾಹಕರಿಗೆ ಒದಗಿಸಿದಾಗ ವಸ್ತ್ರೋದ್ಯಮ ಬೆಳವಣಿಗೆ ಕಾಣುತ್ತದೆ. ಈ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

2ನೇ ಅಂತಸ್ತಿನ  ಸೀರೆ ವಿಭಾಗ ಉದ್ಘಾಟಿಸಿದ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ದೇಶದ ವಿಜ್ಞಾನಿಗಳು ಚಂದ್ರಲೋಕವನ್ನು ಅವಲೋಕಿಸುವ ಅವಕಾಶವನ್ನು ಒದಗಿಸಿಕೊಟ್ಟರೆ, ಜಯಲಕ್ಷ್ಮೀ ಸಿಲ್ಕ್$Õನವರು ಉಡುಪಿಯ ಜನತೆಗೆ ಟೆಕ್ಸ್‌ಟೈಲ್ಸ್‌ನ ಅವಲೋಕನ ಮಾಡಿಸಿದ್ದಾರೆ. ಕ್ವಾಲಿಟಿ, ಗ್ಯಾರಂಟಿ, ಸರ್ವಿಸ್‌ ಸಮರ್ಪಕವಾಗಿದ್ದರೆ ಉದ್ಯಮ ಯಶಸ್ವಿ ಆಗುವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಟೆಕ್ಸ್‌ಟೈಲ್ಸ್‌ ವ್ಯವಹಾರದಲ್ಲಿ 2ನೇ ಸ್ಥಾನ ಗಳಿಸಿದ ಸಂಸ್ಥೆ ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಗಳಿಸಲಿ. ಸಾವಿರಾರು ಜನರಿಗೆ ಉದ್ಯೋಗಾವಕಾಶ ನೀಡಿದ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

ಹ್ಯಾಂಡ್ಲೂಮ್ ವಿಭಾಗವನ್ನು ಉದ್ಯಮಿ ಜರ್ರಿ ವಿನ್ಸೆಂಟ್ ಡಯಾಸ್ ಉದ್ಘಾಟಿಸಿದರೆ,ಗರ್ಲ್ಸ್ ಗೌನ್, ಗಾಗ್ರಾ ವಿಭಾಗವನ್ನು ಸಿನೆಮಾ ನಟಿಯರಾದ ಅಂಶಾ ಮತ್ತು ಮಾನಸಿ ಉದ್ಘಾಟಿಸಿದರು. 2ನೇ ಮಹಡಿಯ ಸಿಲ್ಕ್ ಸೀರೆಗಳ ವಿಭಾಗವನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉನ್ನತ ಗುಣಮಟ್ಟದ ಸೀರೆ ವಿಭಾಗವನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು.

3ನೇ ಮಹಡಿಯಲ್ಲಿನ ಲೈಫ್‌ಸ್ಟ್ರೈಲ್ ವಿಭಾಗವನ್ನು ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ. ಹಾಕೆ, 4ನೇ ಮಹಡಿಯ ಎಥ್ನಿಕ್‌ ವೇರ್ ವಿಭಾಗವನ್ನು ಕರ್ಣಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ರವಿಚಂದ್ರನ್ ಉದ್ಘಾಟಿಸಿ ದರು. 5ನೇ ಮಹಡಿಯಲ್ಲಿ ರುವ ಬ್ರ್ಯಾಂಡೆಡ್ ಮೆನ್ಸ್‌ವೇರ್ ವಿಭಾಗವನ್ನು ಉದ್ಯಾವರ ಹಲೀಮಾ ಸಬ್ಜು ಆಡಿಟೋರಿಯಂನ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಉದ್ಘಾಟಿಸಿದರು.

ಬಾಯ್ಸ್ ಕಿಡ್ಸ್ ವಿಭಾಗವನ್ನು ನಟ ಸಿಐಡಿ ಖ್ಯಾತಿಯ ಹರೀಶ್ ವಾಸು ಶೆಟ್ಟಿ ಮತ್ತು ಗರ್ಲ್ಸ್ ಕಿಡ್ಸ್ ವಿಭಾಗವನ್ನು ದಯಾ ಶೆಟ್ಟಿ ಅನಾವರಣ ಗೊಳಿಸಿದರು. ಬ್ರ್ಯಾಂಡೆಡ್ ಮೆನ್ಸ್ ಎಕ್ಸ್‌ಕ್ಲೂಸಿವ್ ವಿಭಾಗವನ್ನು ಉದ್ಯಮಿ ವಾಸುದೇವ ಕಾಮತ್ ಮತ್ತು ಲೆಕ್ಕಪರಿಶೋಧಕ ನವೀನ್ ನಾಯಕ್ ಉದ್ಘಾಟಿಸಿದರು.

ವಿಧಾನಸಭೆಯ ಸ್ವೀಕರ್ ಯು.ಟಿ. ಖಾದರ್ ಹಾಗೂ ಶಾಸಕ ಯಶ್ಪಾಲ್ ಎ. ಸುವರ್ಣ ಸಂಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿದರು. ಉದ್ಯಮಿ ಪುರುಷೋತ್ತಮ್ ಪಿ. ಶೆಟ್ಟಿ, ಶಶಿಕುಮಾರ್ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಸ್ಥೆಯ ಮಾಲಕರಾದ ವೀರೇಂದ್ರ ಹೆಗ್ಡೆ, ರವೀಂದ್ರ ಹೆಗ್ಡೆ, ಜಯಲಕ್ಷ್ಮಿ ವೀರೇಂದ್ರ ಹೆಗ್ಡೆ, ಅಪರ್ಣಾ ರವೀಂದ್ರ ಹೆಗ್ಡೆ ಈ ವೇಳೆ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಒಂದೇ ಸೂರಿನಡಿ ಎಲ್ಲವೂ ಲಭ್ಯ: ಜಯಲಕ್ಷ್ಮೀ ಸಿಲ್ಕ್ಸ್ ಸಮುಚ್ಛಯ ಏಳು ಅಂತಸ್ತುಗಳನ್ನು ಹೊಂದಿದ್ದು, ಇಡೀ ಕುಟುಂಬಕ್ಕೆ ಅಗತ್ಯವಿರುವ ಎಲ್ಲವೂ ಒಂದೇ ಸೂರಿನಡಿ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ. ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರ ಅಗತ್ಯಕ್ಕೆ ತಕ್ಕಂತೆ ಬೇಕಾದ ವೈವಿಧ್ಯತೆ, ನಾವೀನ್ಯತೆಯೊಂದಿಗೆ ಎಲ್ಲವೂ ಲಭ್ಯವಾಗಲಿದೆ.

ನೆಲ ಅಂತಸ್ತಿನಲ್ಲಿ ಆರ್ಟ್ ಫ್ಯಾಶನ್ ಜುವೆಲ್ಲರಿ, ಬ್ರಾಂಡೆಡ್ ವಾಚ್‌ಗಳು, ಕೈಮಗ್ಗದ ವಿಭಾಗಗಳಿದ್ದರೆ, ಮೊದಲ ಅಂತಸ್ತಿ ನಲ್ಲಿ ಎಲ್ಲಾ ಶ್ರೇಣಿಯ ಸೀರೆಗಳು, ಲೆಹೆಂಗಾ, ಗಾಗ್ರಾಗಳಿರಲಿವೆ. ಎರಡನೇ ಅಂತಸ್ತಿನಲ್ಲಿ ಮದುವೆ ರೇಷ್ಮೆ ಸೀರೆಗಳ ದೊಡ್ಡ ಸಂಗ್ರಹವಿರುತ್ತದೆ.

ಇನ್ನು ಮೂರನೇ ಅಂತಸ್ತಿನಲ್ಲಿ ಮಹಿಳೆಯರಿಗೆ ಬೇಕಾದ ಅತ್ಯಾಧುನಿಕ ಸ್ಟೈಲ್‌ನ ಉಡುಪು, ರೇಡಿಮೆಡ್ ಉಡುಪುಗಳಿರು ತ್ತವೆ. ನಾಲ್ಕನೇ ಮಹಡಿಯಲ್ಲಿ ಯುವಕ-ಯುವತಿಯರಿಗೆ ಬೇಕಾದ ಎಲ್ಲಾ ವಿಧದ ಉಡುಗೆ-ತೊಡುಗೆಗಳಿರುತ್ತವೆ. ಐದನೇ ಅಂತಸ್ತಿನಲ್ಲಿ ಪುರುಷರಿಗಾಗಿ ಬ್ರಾಂಡೆಡ್ ಮೆನ್ಸ್‌ವೇರ್, ಶರ್ಟಿಂಗ್, ಸೂಟಿಂಗ್‌ಗಳ ಅಪಾರ ಸಂಗ್ರಹವಿದೆ.

ಫ್ಯಾಮಿಲಿ ಸ್ಟುಡಿಯೋ: ಮದುವೆ ಸೇರಿದಂತೆ ಮನೆಯಲ್ಲಿ ನಡೆಯುವ ಯಾವುದೇ ಶುಭ ಸಮಾರಂಭಗಳಿಗೆ ಕುಟುಂಬ ಸಮೇತರಾಗಿ ಬಟ್ಟೆ ಖರೀದಿಗೆ ಬರುವ ಗ್ರಾಹಕರ ಬೇಡಿಕೆಗೆ ಕ್ಷಣಾರ್ಧದಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ 6 ಫ್ಯಾಮಿಲಿ ಸ್ಟುಡಿಯೋ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಗ್ರಾಹಕರು ತಮ್ಮ ಮನಸ್ಸಿಗೆ ಇಷ್ಟವಾಗಿಗುವ ಉಡುಪುಗಳ ನಾನಾ ಶ್ರೇಣಿಗಳನ್ನು ವೀಕ್ಷಿಸಿ ಖರೀದಿಸಬಹುದು.

ಇಲ್ಲಿ ಮಹಿಳೆಯರು ಬಯಸುವ ಕಾಂಚಿಪುರಂ, ಧರ್ಮಾವರಂ, ಮೈಸೂರು ಸಿಲ್ಕ್, ಪ್ರಿಂಟೆಡ್ ಸಿಲ್ಕ್ ಕಾಟನ್ ಸಿಲ್ಕ್ಸ್, ಬೆಂಗಾಲಿ ಕಾಟನ್ ಸಹಿತ ದೇಶದ ವಿವಿಧೆಡೆಗಳಲ್ಲಿ ತಯಾರಾಗುವ ಸೀರೆಗಳ ಬೃಹತ್ ಸಂಗ್ರಹವಿದೆ. ಮಹಿಳೆಯರ ಕುರ್ತಾ, ಬಾಟಂಗಳಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆಯೂ ಇಲ್ಲಿದೆ. ಪುರುಷರಿಗೂ ಅವರು ಬಯಸುವ ಎಲ್ಲಾ ಪ್ರಸಿದ್ಧ ಬ್ರ್ಯಾಂಡ್‌ ಗಳ ರೆಡಿಮೇಡ್ ಉಡುಪುಗಳ ಸಂಗ್ರಹವೂ ಜಯಲಕ್ಷ್ಮೀಯಲ್ಲಿದೆ. ಇಲ್ಲಿ ಮದುಮಕ್ಕಳಿಗೂ ಬೇಕಾಗಿರುವ ಎಲ್ಲಾ ಶೈಲಿಯ ಹಾಗೂ ಬ್ರ್ಯಾಂಡ್‌ಗಳ ಉಡುಪು ಲಭ್ಯವಿದ್ದು, ಇದಕ್ಕಾಗಿ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆಯಿದೆ.

700 ನುರಿತ ಸಿಬ್ಬಂದಿಗಳ ಸೇವೆ: ಜಯಲಕ್ಷ್ಮೀಯಲ್ಲಿ ಗ್ರಾಹಕರಿಗೆ ಎಂದಿನಂತೆ ನಗುಮೊಗದ ಹಾಗೂ ಗುಣಮಟ್ಟದ ಸೇವೆಯನ್ನು ನೀಡುವ ನಿಟ್ಟಿನಲ್ಲಿ 700 ಮಂದಿ ನುರಿತ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ವಾರದ 7 ದಿನವೂ ಉಡುಪಿ ಬನ್ನಂಜೆಯ ಜಯಲಕ್ಷ್ಮೀ ಮಳಿಗೆ ಬೆಳಗ್ಗೆ 9:30ರಿಂದ ರಾತ್ರಿ 8:30ರವರೆಗೆ ತೆರೆದಿರುತ್ತದೆ.

ಜಯಲಕ್ಷ್ಮೀ ಸಿಲ್ಕ್ಸ್ ಮಲ್ಪೆ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಾವಳಿ ಬೈಪಾಸ್ ಹಾಗೂ ಸಿಟಿ ಬಸ್ ನಿಲ್ದಾಣದಿಂದ ಅನತಿ ದೂರದಲ್ಲಿದೆ. ಈ ಕಟ್ಟಡದ ಸುತ್ತಲೂ ವಿಶಾಲ ಜಾಗವಿದ್ದು, ಏಕಕಾಲದಲ್ಲಿ 200 ಕಾರುಗಳ ಪಾರ್ಕಿಂಗ್‌ಗೆ ಬೇಕಾದ ಸೌಲಭ್ಯವಿದೆ.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo