ಉಡುಪಿ: ಉಡುಪಿ ಸಮೀಪದ ಉದ್ಯಾವರದಲ್ಲಿ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ರತ್ನ (42) ಮೃತ ಮಹಿಳೆಯಾಗಿದ್ದಾರೆ.ಇವರು ಪ್ರಯಾಣಿಸುತ್ತಿದ್ದ ಕಾರು ಮಂಗಳೂರಿನಿಂದ ಉಡುಪಿ ಕಡೆಗೆ ಬರುವಾಗ ಉದ್ಯಾವರದ ಸಮೀಪ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆಯಿತೆನ್ನಲಾಗಿದೆ.
ಕಾರಿನಲ್ಲಿ ರತ್ನ ಅವರ ಜೊತೆ ಒಬ್ಬ ಪುರುಷ ಕೂಡ ಇದ್ದು ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ವಿಷಯ ತಿಳಿದು ಆಪದ್ಭಾಂಧವ ಈಶ್ವ ಮಲ್ಪೆ ಸ್ಥಳಕ್ಕೆ ಧಾವಿಸಿ ,ರಕ್ತಸಿಕ್ತವಾಗಿ ಬಿದ್ದಿದ್ದ ರತ್ನ ಅವರನ್ನು ಮಣಿಪಾಲದ ಕೆಎಂಸಿಗೆ ಸಾಗಿಸಿ ಮಾನವೀಯತೆ ಮೆರೆದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ