Slider

ಭಾರತ ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಪ್ರಕಟ; ಜುಲೈ 12ರಿಂದ ಸರಣಿ ಶುರು

Udupi


ನವದೆಹಲಿ: ಭಾರತ-ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಕೆರಿಬಿಯನ್ ನಾಡಲ್ಲಿ ಜುಲೈ 12 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ.

ಡೊಮಿನಿಕಾದಲ್ಲಿ ಜುಲೈ 12 ರಿಂದ 16 ರವರೆಗೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಹಾಗೆಯೇ 2ನೇ ಟೆಸ್ಟ್ ಪಂದ್ಯವು ಜುಲೈ 20 ರಿಂದ 24 ರವರೆಗೆ ಜರುಗಲಿದೆ. ಈ ಪಂದ್ಯಕ್ಕೆ ಟ್ರಿನಿಡಾಡ್​ನ ಓವಲ್ ಮೈದಾನ ಆತಿಥ್ಯ ವಹಿಸಲಿದೆ.

ಇನ್ನು ಮೊದಲ ಏಕದಿನ ಪಂದ್ಯವು ಜುಲೈ 27 ರಂದು ನಡೆದರೆ, 2ನೇ ಏಕದಿನ ಪಂದ್ಯ ಜುಲೈ 29 ರಂದು ಜರುಗಲಿದೆ. ಈ 2 ಪಂದ್ಯಕ್ಕೂ ಬಾರ್ಬಡೋಸ್​ನ ಕಿಂಗ್ಸ್​ಸ್ಟನ್ ಓವಲ್ ಮೈದಾನದ ಆತಿಥ್ಯವಹಿಸಲಿದೆ. 3ನೇ ಏಕದಿನ ಪಂದ್ಯವು ಆಗಸ್ಟ್ 1 ರಂದು ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಹಾಗೆಯೇ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್ 3 ರಂದು, 2ನೇ ಪಂದ್ಯ ಆಗಸ್ಟ್ 6 ರಂದು, 3ನೇ ಪಂದ್ಯ ಆಗಸ್ಟ್ 8 ರಂದು ನಡೆಯಲಿದೆ. ಇನ್ನು 4ನೇ ಪಂದ್ಯವು ಆಗಸ್ಟ್ 12 ರಂದು, 5ನೇ ಟಿ20 ಪಂದ್ಯ ಆಗಸ್ಟ್ 13 ರಂದು ಫ್ಲೋರಿಡಾದಲ್ಲಿ ನಡೆಯಲಿದೆ. ಈ ಸರಣಿಗಾಗಿ ಇನ್ನೂ ಕೂಡ ಟೀಮ್ ಇಂಡಿಯಾವನ್ನು ಪ್ರಕಟಿಸಿಲ್ಲ. ಅತ್ತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಹೀನಾಯವಾಗಿ ಸೋತಿರುವ ಕಾರಣ ಭಾರತ ಟೆಸ್ಟ್ ತಂಡದಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.

ಹಾಗೆಯೇ ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಸೀಮಿತ ಓವರ್​ಗಳ ಸರಣಿಗಾಗಿ ಬಲಿಷ್ಠ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo