ವಾಷಿಂಗ್ಟನ್ : ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ನಾವು ತಟಸ್ಥವಾಗಿಲ್ಲ. ನಾವು ಶಾಂತಿಯ ಕಡೆ ನಿಲ್ಲುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶೇಷ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.ವಿಶೇಷ ವಿಮಾನದ ಮೂಲಕ ಅವರು ನ್ಯೂಯಾರ್ಕ್ ತಲುಪಿದ್ದಾರೆ. ಇದಕ್ಕೂ ಮುನ್ನ ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಗೆ ಸಂದರ್ಶನ ನೀಡಿದ ಮೋದಿ, ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ನಾವು ತಟಸ್ಥವಾಗಿಲ್ಲ. ನಾವು ಶಾಂತಿಯ ಕಡೆ ನಿಲ್ಲುತ್ತೇವೆ. ಯುದ್ಧ ನಿಲ್ಲಿಸಲು ಭಾರತ ಮಾಡಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಿದೆ ಎಂದಿದ್ದಾರೆ.
ಭಾರತ-ಚೀನಾ ಸಂಬಂಧದ ಬಗ್ಗೆ ಪ್ರಸ್ತಾಪಿಸುತ್ತಾ, ಯಾವುದೇ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ಇರಬೇಕು ಎಂದರೆ ಗಡಿಯಲ್ಲಿ ಶಾಂತಿಯುತ ವಾತಾವರಣ ಇರುವುದು ಮುಖ್ಯ. ಭಾರತ-ಅಮೆರಿಕ ಬಂಧ ಹಿಂದೆಂದಿಗಿಂತಲೂ ಬಲವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಸ್ವಾತಂತ್ರ್ಯ ಭಾರತದಲ್ಲಿ ಹುಟ್ಟಿದ ಮೊದಲ ಪ್ರಧಾನಿ ನಾನು. ಅದಕ್ಕೆ ನನ್ನ ಆಲೋಚನೆಗಳು ದೇಶದ ಇತಿಹಾಸ, ಸಂಪ್ರದಾಯಗಳಿಂದ ಪ್ರೇರಣೆ ಹೊಂದಿವೆ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ.
ಈ ನಡುವೆ ಚೀನಾ ಎಂದಿನಂತೆ ಕ್ಯಾತೆ ತೆಗೆದಿದೆ. ನಮ್ಮ ಬೆಳವಣಿಗೆ ತಡೆಯಲು ಭಾರತಕ್ಕೆ ಪ್ರಚೋದನೆ ನೀಡುವ ಕೆಲಸವನ್ನು ಅಮೆರಿಕ ಮಾಡುತ್ತಿದೆ. ಆದರೆ ಇದು ಫಲಿಸಲ್ಲ. ಜಾಗತಿಕ ರಫ್ತಿನಲ್ಲಿ ನಮ್ಮ ಸ್ಥಾನವನ್ನು ಭರ್ತಿ ಮಾಡಲು ಭಾರತ ಸೇರಿ ಯಾವ ದೇಶಕ್ಕೂ ಸಾಧ್ಯ ಆಗಲ್ಲ. ಅಮೆರಿಕ ಭೌಗೋಳಿಕ ರಾಜಕೀಯ ಲೆಕ್ಕದಲ್ಲಿ ಎಡವುತ್ತಿದೆ ಎಂದು ಚೀನಾ ಹೇಳಿಕೊಂಡಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ