ಹೆಬ್ರಿ:- ಟಿಪ್ಪರ್ ಲಾರಿಯೊಂದು ಈಚರ್ ವಾಹನಕ್ಕೆ ಢಿಕ್ಕೆ ಹೊಡೆದ ಪರಿಣಾಮ ಈಚರ್ ಚಾಲಕ ಮೃತಪಟ್ಟ ಘಟನೆ ನಾಡ್ಪಾಲು ಗ್ರಾಮದ ಜಕ್ಕನಮಕ್ಕಿ ತಿರುವಿನ ಬಳಿ ಶನಿವಾರ ಸಂಜೆ 6ಗಂಟೆ ಸುಮಾರಿಗೆ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಕೊಪ್ಪದ ಬಾಲಕೃಷ್ಣ ಜಿ.ಎಂದು ಗುರುತಿಸಲಾಗಿದೆ. ಶಿವಪುರದಲ್ಲಿ ಜಲ್ಲಿ ಲೋಡ್ ಮಾಡಿಕೊಂಡು ಆಗುಂಬೆ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯು, ಆಗುಂಬೆ ಕಡೆಯಿಂದ ಬರುತ್ತಿದ್ದ ಈಚರ್ ಕ್ಯಾಂಟರ್ ವಾಹನಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಅಪಘಾತದಿಂದ ಈಚರ್ ಕ್ಯಾಂಟರ್ ವಾಹನದ ಮುಂದಿನ ಕ್ಯಾಬೀನ್ ಭಾಗವು ಸಂಪೂರ್ಣ ಜಖಂ ಆಗಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಈಚರ್ ಚಾಲಕ ಬಾಲಕೃಷ್ಣ ಜಿ. ಹೆಬ್ರಿ ಸರಕಾರಿ ಆಸ್ಪತ್ರೆಗೆ ಸಂಜೆ 7ಗಂಟೆಗೆ ಕರೆ ತರುವಾಗ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ